ಅಂದರ್ ಬಾಹರ್ : ಎಂಟು ಮಂದಿ ವಶಕ್ಕೆ
Update: 2025-10-13 20:06 IST
ಕುಂದಾಪುರ : ಕುಂದಾಪುರ ಮದ್ದುಗುಡ್ಡೆ ಬಳಿ ಅ.12ರಂದು ರಾತ್ರಿ ವೇಳೆ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದ ಮಿಥುನ ಖಾರ್ವಿ(35), ಚಂದ್ರ ಪೂಜಾರಿ(45), ರೆಹಮತ್(51), ನಿರಂಜನ್ ನಾಯಕ್(39) ಎಂಬವರನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದು, 26,60ರೂ. ನಗದು ಸ್ವಾಧೀನಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ಕಿರಣ, ಹರೀಶ್, ಮಂಜುನಾಥ ಎಂಬವರು ಓಡಿ ಪರಾರಿಯಾಗಿದ್ದು, ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ : ಆಲೂರು ಮಾವಿನಗುಳಿ ಬಳಿ ಅ.12ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ನಾಗರಾಜ ದೇವಾಡಿಗ (38), ಪ್ರದೀಪ್ ಮೊಗವೀರ(38), ಶರಣಪ್ಪ ಕಳ್ಳೊಳ್ಳಿ(32), ಕೃಷ್ಣಪ್ಪ ರಾಥೋಡ್ (28) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು, 64 0ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.