×
Ad

ಅಪ್ಪೆಮ್ಮೆ ತುಳು ನಾಟಕದ ಕೃತಿ ಬಿಡುಗಡೆ- ಮಕ್ಕಳ ಕವಿಗೋಷ್ಠಿ

Update: 2023-09-25 17:36 IST

ಉಡುಪಿ, ಸೆ.25: ಕಟಪಾಡಿ ಯಶಸ್ ಪ್ರಕಾಶನ, ಉಡುಪಿ ತುಳುಕೂಟ, ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ವತಿ ಯಿಂದ ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಬರೆದ ಅಪ್ಪೆಮ್ಮೆ ತುಳು ನಾಟಕದ ಕೃತಿ ಬಿಡುಗಡೆ ಮತ್ತು ಮಕ್ಕಳ ತುಳು ಕವಿಗೋಷ್ಠಿ ಕಾರ್ಯಕ್ರಮ ಉಡುಪಿ ಕಿದಿಯೂರು ಹೊಟೇಲಿನ ಪವನ್ ರೂಫ್‌ಟಾಪ್ ಹಾಲ್‌ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬ್ರಹ್ಮಾವರ ನ್ಯೂ ಕರ್ನಾಟಕ ಬಿಲ್ಡರ್ಸ್‌ ಸಂಸ್ಥೆಯ ಮಾಲಕ ಚೇತನ್ ಕುಮಾರ್ ಶೆಟ್ಟಿ ಉದ್ಘಾಟಿಸಿ ದರು. ಪುಸ್ತಕವನ್ನು ಉಡುಪಿಯ ಸಮಾಜ ಸೇವಕ ಉಡುಪಿ ವಿಶ್ವನಾಥ ಶೆಣೈ ಮತ್ತು ಪ್ರಭಾವತಿ ದಂಪತಿ ಬಿಡುಗಡೆ ಮಾಡಿದರು. ಅಧ್ಯಕ್ಷತೆಯನ್ನು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ವಹಿಸಿದ್ದರು.

ಉಪ್ಪುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ವಿ.ಕೆ.ಯಾದವ್ ಕೃತಿ ಪರಿಚಯ ಮಾಡಿದರು. ಇದೇ ವೇಳೆ ಸಮಾಜ ಸೇವಕರಾದ ಲೀಲಾಧರ್ ಶೆಟ್ಟಿ ಕರಂದಾಡಿ ಹಾಗೂ ಈಶ್ವರ್ ಮಲ್ಪೆಅವರನ್ನು ಸನ್ಮಾನಿಸಲಾಯಿತು.

ಉಡುಪಿಯ ಉದ್ಯಮಿ ಮನೋಹರ್ ಶೆಟ್ಟಿ, ಪಾಂಗಾಳಗುಡ್ಡೆ ಗರಡಿಮನೆ ಸುಧಾಕರ್ ಡಿ.ಅಮೀನ್, ಮತ್ಸ್ಯೋದ್ಯಮಿಗಳಾದ ಹರೀಶ್ ಶ್ರೀಯಾನ್ ಮಲ್ಪೆ, ಉಡುಪಿ ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರ್, ಯಶಸ್ ಪ್ರಕಾಶನ ಸಂಸ್ಥೆಯ ಮುಖ್ಯಸ್ಥೆ ಪ್ರೀತಿ ಪ್ರಕಾಶ ಸುವರ್ಣ ಕಟಪಾಡಿ, ಸುಂದರಿ ಸುವರ್ಣ, ಇಂದಿರಾ ವಿ.ಕಾಂಚನ್, ನಾರಾಯಣ ಸಾಲ್ಯಾನ್, ನವಮಿ ಸುವರ್ಣ ಉಪಸ್ಥಿತರಿದ್ದರು.

ಉಡುಪಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಹಾಗೂ ಸಾಹಿತಿ ಪೂರ್ಣಿಮ ಜನಾದರ್ನ್ ಅಧ್ಯಕ್ಷತೆಯಲ್ಲಿ ನಡೆದ ಅಪ್ಪೆಮ್ಮನೊಟ್ಟುಗು ಜೋಕ್ಲೆ ತುಳು ಕವಿಗೋಷ್ಠಿಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಪ್ರೌಢಶಾಲಾ 16 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಸುಶಾಂತ್ ಆಚಾರ್ಯ, ಶಿವಾನಿ ಅಂಬಲಪಾಡಿ, ತೃಷ ಅದಮಾರು, ಸಂದರ್ಶಿನಿ ಕಾರ್ಕಳ, ಸಾನ್ವಿ ಪೆರ್ಡೂರು, ಕಾರ್ತಿಕ ಮುದ್ರಾಡಿ, ಶಾನ್ವಿ ಕಾರ್ಕಳ, ಸುಪ್ರಿಯ ಕಾರ್ಕಳ, ಪ್ರೇಕ್ಷಾ ಆಚಾರ್ಯ ನಕ್ರೆ, ನಂದಿನಿ ಅಲೆವೂರು, ಮಹಾಲಕ್ಷ್ಮೀ ಬನ್ನಂಜೆ, ಯಶಸ್ ಪಿ.ಸುವರ್ಣ ಕಟಪಾಡಿ, ಪೂರ್ವಿ ಎಸ್.ಕೋಟ್ಯಾನ್ ಉದ್ಯಾವರ, ಮಿಶಾ ಕೋಟ್ಯಾನ್ ಪಡುಬಿದ್ರಿ, ಅಭಿಷೇಕ್ ಕುಂಜಾರುಗಿರಿ, ವೈಷ್ಣವಿ ದೇವಾಡಿಗ ಸ್ವರಚಿತ ಕವನ ವಾಚಿಸಿದರು.

ನಾಟಕಕಾರ ಪ್ರಕಾಶ ಸುವರ್ಣ ಕಟಪಾಡಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಡಾ.ವಿದ್ಯಾ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ ದಯಾನಂದ ಕೆ.ಶೆಟ್ಟಿ ದೆಂದೂರು ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News