ಉಡುಪಿ ಜಿಲ್ಲೆಯ 130 ಮದರಸಗಳಲ್ಲಿ ಪಬ್ಲಿಕ್ ಪರೀಕ್ಷೆ
ಉಡುಪಿ, ಜ.30: ಮದ್ರಸ ಶಿಕ್ಷಣದ ವಾರ್ಷಿಕ ಪರೀಕ್ಷೆಯ ಭಾಗವಾಗಿ 5, 7, 10, 12 ತರಗತಿಗಳ ಪಬ್ಲಿಕ್ ಪರೀಕ್ಷೆಯು ನಾಳೆಯಿಂದ ಆರಂಭಗೊಳ್ಳಲಿದ್ದು, ಈ ಪ್ರಯುಕ್ತ ಉಡುಪಿ ಜಿಲ್ಲೆಯಾದ್ಯಂತ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಯಿತು.
ಉಡುಪಿ ಜಿಲ್ಲೆಯಾದ್ಯಂತ ಒಟ್ಟು 130 ಮದರಸಗಳಲ್ಲಿ ನಡೆಯಲಿರುವ ಪರೀಕ್ಷೆಗೆ ಸಂಬಂಧಿಸಿದ ಪರಿಕರಗಳನ್ನು ವಿತರಿಸಲಾಯಿತು. ಕಾಪು ಖಾಝಿ ಅಹ್ಮದ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಉಡುಪಿ ಜಿಲ್ಲಾ ಸುನ್ನೀ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಅಬ್ದುಲ್ ರಝಾಕ್ ಖಾಸಿಮಿ ಅಧ್ಯಕ್ಷತೆ ವಹಿಸಿದ್ದರು.
ಮೇಲ್ವಿಚಾರಕ ಸೂಪರ್ಡೆಂಟ್ ಬಾಳೆಪುಣಿ ಇಮ್ದಾದೀ ವಿಷಯ ಮಂಡಿಸಿದರು. ಕರ್ನಾಟಕ ರಾಜ್ಯ ಎಸ್‌ಜೆಎಂ ಕೋಶಾಧಿಕಾರಿ ಎಂ.ಕೆ. ಅಬ್ದುರ‌್ರಶೀದ್ ಸಖಾಫಿ ಮಜೂರು ಉದ್ಘಾಟಿಸಿದರು. ಜಿಲ್ಲಾ ಎಸ್‌ಜೆಎಂ ಪ್ರಧಾನ ಕಾರ್ಯದರ್ಶಿ ಅಬ್ದುರ‌್ರಹ್ಮಾನ್ ಸಅದಿ ಸ್ವಾಗತಿಸಿದರು. ಉಡುಪಿ ರೇಂಜ್ ಅಧ್ಯಕ್ಷ ನೇಜಾರ್ ಉಸ್ಮಾನ್ ಮದನಿ, ಕಾಪು ರೇಂಜ್ ಅಧ್ಯಕ್ಷ ಅಬ್ದುಲ್ ರಶೀದ್ ಸಖಾಫಿ ಬೆಳಪು, ಉಚ್ಚಿಲ ರೇಂಜ್ ಅಧ್ಯಕ್ಷ ಶಾಹುಲ್ ಹಮೀದ್ ನಯೀಮಿ ಮೊದಲಾದವರು ಉಪಸ್ಥಿತರಿದ್ದರು.