×
Ad

ಕಾಪುವಿನಲ್ಲಿ ಬಿಐಇ ವಾರ್ಷಿಕ ಪರೀಕ್ಷೆ

Update: 2025-02-09 19:45 IST

ಕಾಪು: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಷನ್ ಕರ್ನಾಟಕ, ರಾಜ್ಯ ಮಟ್ಟದಲ್ಲಿ ನಡೆಸುವ ವಾರ್ಷಿಕ ಪರೀಕ್ಷೆಯು ಕಾಪು ವರ್ತುಲದ ಸೆಂಟರ್ 166 ರ ವಿದ್ಯಾರ್ಥಿಗಳಿಗೆ, ಹೋಟೆಲ್ ಕೆ. 1 ನ ಸಭಾಂಗಣದಲ್ಲಿ ನಡೆಯಿತು.

ಇಸ್ಲಾಮ್ ನ ಬಗ್ಗೆ ನೈಜ ತಿಳುವಳಿಕೆ ಮೂಡಿಸುವ ಬಗ್ಗೆ, ತಳ ಮಟ್ಟದಿಂದ ಹಿಡಿದು ಅಂತಿಮ ಪರಿಣಾಮದ ತನಕದ ಬೋಧನೆಗಳನ್ನು ಅಭ್ಯಸಿಸಿ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ್ಡಾಗ ಮನುಷ್ಯನ ಇಹ ಮತ್ತು ಪರಲೋಕ ಜೀವನ ಬೆಳಗುತ್ತದೆ ಮತ್ತು ಮನುಷ್ಯನು ಸಮಾಜದಲ್ಲಿ ಸೌಹಾರ್ದಮಯ ಜೀವನ ಸಾಗಿಸಬಹುದು ಎಂಬ ಸಂದೇಶವುಳ್ಳ ಇಸ್ಲಾಮಿ ಪುಸ್ತಕಗಳನ್ನು ತಮ್ಮ ಮನೆಯಲ್ಲಿಯೇ ಅಧ್ಯಯನ ಮಾಡಿ ಬಂದು ಪರೀಕ್ಷೆಯಲ್ಲಿ ಭಾಗವಹಿಸಬೇಕಾಗಿದ್ದು , ಇದರಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು.

ಈ ಪರೀಕ್ಷೆಯಲ್ಲಿ ಗಣನೀಯ ಸಂಖ್ಯೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನೀಯರು ಭಾಗವಹಿಸಿದರು.

ಈ ಪರೀಕ್ಷೆಯು ಜಮಾ ಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲದ ಸ್ಥಾನೀಯ ಅಧ್ಯಕ್ಷರು ಅನ್ವರ್ ಅಲಿ ಯವರ ಮೇಲುಸ್ತುವಾರಿಯಲ್ಲಿ ನಡೆಯಿತು.

ಸೆಂಟರ್ ನ ಸಂಚಾಲಕಿ ಶೆಹನಾಝ್ ಕಾಪು, ಫಝಿಲತ್ ಬಾನು, ಬೀಬಿ ಬತುಲ್ ಹಾಗೂ ಮುಹಮ್ಮದ್ ಹಾಶಿಮ್ ಸಾಹೇಬ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News