×
Ad

ಕಲಾವಿದ ಕೆ.ಎಂ.ಹೊಳ್ಳರವರ ಜನ್ಮಶತಾಬ್ದಿ- ಗುರುವಂದನೆ

Update: 2023-09-26 18:25 IST

ಶಿರ್ವ: ಶಿರ್ವದ ಸಂತ ಮೇರಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಪಂಡಿತರಾಗಿ, ನಾಟಕ, ಯಕ್ಷಗಾನ, ರಂಗಕಲೆ ಸಹಿತ ಹಲವು ಕ್ಷೇತ್ರದಲ್ಲಿ ದುಡಿದ ಅಭಿಜಾತ ಕಲಾವಿದ ಕೆ.ಎಂ.ಹೊಳ್ಳ(ಹೊಳ್ಳ ಮಾಸ್ಟ್ರು) ಅವರ ಜನ್ಮ ಶತಾಬ್ದಿ ಕಾರ್ಯಕ್ರಮ ರವಿವಾರ ಶಿರ್ವ ಮಹಿಳಾ ಸೌಧದಲ್ಲಿ ಜರಗಿತು.

ಶಿರ್ವ ಸಂತಮೇರಿ ವಿದ್ಯಾ ಸಂಸ್ಥೆಯ ನಿವೃತತಿ ಕನ್ನಡ ಉಪನ್ಯಾಸಕರಾದ ಕೆ.ಎಸ್.ಶ್ರೀಧರ ಮೂರ್ತಿ ದಿಕ್ಸೂಚಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಹೊಳ್ಳರ ಜೊತೆಗೆ ಸಹೋದ್ಯೋಗಿಗಳಾಗಿ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕರುಗಳಾದ ರಾಮ ಚಂದ್ರ ತಂತ್ರಿ, ಕೆ.ಸದಾಶಿವ, ಪ್ರೊ.ವೈ.ಭುವನೇಂದ್ರ ರಾವ್, ಕೇಶವ ಭಟ್, ರತ್ನಾಕರ ರಾವ್, ಸಚ್ಚಿದಾನಂದ ಆಚಾರ್, ಕೆ.ಎಸ್.ಶ್ರೀಧರಮೂರ್ತಿ, ದೇವೇಂದ್ರ ನಾಯಕ್, ಅನಂತ ಮೂಡಿತ್ತಾಯ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಜಗದೀಶ ಕುಮಾರ್, ಕಿಶೋರ್ ಕುಮಾರ್, ಪ್ರದೀಪ್ ಕುಮಾರ್, ನಯನಾ, ವಿಶ್ವನಾಥ್, ಶರತ್‌ಕುಮಾರ್ ಮೊದಲಾವರು ಉಪಸ್ಥಿತರಿದ್ದರು. ಅನಂತ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಕುಮಾರ್ ವಂದಿಸಿದರು. ಶ್ರೀಧರ ಕಾಮತ್ ಸಹಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News