ಬ್ರಹ್ಮಾವರ | ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು 1.38 ಲಕ್ಷ ರೂ. ವಂಚನೆ
Update: 2025-12-01 21:31 IST
ಬ್ರಹ್ಮಾವರ: ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿ ಆನ್‌ಲೈನ್ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇರೂರು ಗ್ರಾಮದ ರೀಟಾ ರೊಡ್ರಿಗಸ್(50) ಎಂಬವರಿಗೆ ನ.20ರಂದು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಎಟಿಎಂ ರಿನಿವಲ್ ಮಾಡಲು ಇದೆ ಎಂದು ಹೇಳಿ, ಆಧಾರ್ ಕಾರ್ಡ್, ಪಾನ್ ಕಾರ್ಡ್ ವಿವರ ಪಡೆದು ನಂತರ ಮೊಬೈಲ್‌ಗೆ ಓಟಿಪಿ ಕಳುಹಿಸಿದನು. ಅದನ್ನು ಕೇಳಿ ಪಡೆದು ರೀಟಾ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಆರು ಬಾರಿ ಒಟ್ಟು ರೂ 1,38,900ರೂ. ಹಣವನ್ನು ತನ್ನ ಖಾತೆಗೆ ವರ್ಗಾಯಿಸಿ ಕೊಂಡು ವಂಚಿಸಿರುವುದಾಗಿ ದೂರಲಾಗಿದೆ.