×
Ad

ಬ್ರಹ್ಮಾವರ : ಮದರಸ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯ ಸಂಶಯಾಸ್ಪದ ಸಾವು : ಪ್ರಕರಣ ದಾಖಲು

Update: 2024-10-13 13:27 IST

ಸಾಂದರ್ಭಿಕ ಚಿತ್ರ

ಬ್ರಹ್ಮಾವರ : ಮದರಸ ವಿದ್ಯಾರ್ಥಿಯೊಬ್ಬ ಹಾಸ್ಟೆಲ್‌ನ ಬಾತ್‌ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನ ಸಾವಿನಲ್ಲಿ ಸಂಶಯ ಇರುವುದಾಗಿ ತಾಯಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರಂಬಳ್ಳಿ ಗ್ರಾಮದ ರಿಹಾನ ಬೇಗಂ ಎಂಬವರ ಮಗ ಮುಹಮ್ಮದ್ ಜಹೀದ್(12) ಎಂದು ಗುರುತಿಸಲಾಗಿದೆ. ಈತ ಕಳೆದ 4 ತಿಂಗಳಿನಿಂದ ಬ್ರಹ್ಮಾವರ ತಾಲೂಕಿನ ರಂಗನಕೆರೆಯ ಮದರಸದ ಹಾಸ್ಟೆಲ್‌ ವೊಂದರಲ್ಲಿ ಉಳಿದುಕೊಂಡು ಹೇರಾಡಿ ಖಾಸಗಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾಭ್ಯಾಸ ಮಾಡಿಕೊಂಡಿದ್ದನು. ರಜೆಯಲ್ಲಿ ಮನೆಗೆ ಹೋಗಿದ್ದ ಜಹೀದ್ ರಜೆ ಮುಗಿಸಿ ಅ.11ರಂದು ಮದರಸದ ಹಾಸ್ಟೆಲ್‌ಗೆ ಹೋಗಿದ್ದನು ಎನ್ನಲಾಗಿದೆ.

ಅ.12ರಂದು ರಾತ್ರಿ ವೇಳೆ ಜಹೀದ್ ಮದರಸ ಹಾಸ್ಟೆಲ್ ಬಾತ್‌ರೂಮಿನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಮಗನ ಸಾವಿನಲ್ಲಿ ಸಂಶಯವಿರುವುದಾಗಿ ತಾಯಿ ರಿಹಾನ ಬೇಗಂ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News