ಬೈಂದೂರು : ಹಾಡುಹಗಲೇ ಮನೆಯ ಬಾಗಿಲು ಒಡೆದು ಮನೆಯ ಒಳ ಪ್ರವೇಶಿಸಿ ನಗ ನಗದು ಕಳ್ಳತನ ಮಾಡಿದ ಘಟನೆ ತಾಲೂಕಿನ ಶಿರೂರು ಸಮೀಪದ ಮುದ್ರಮಕ್ಕಿ ಎಂಬಲ್ಲಿ ಗುರುವಾರ ಮಧ್ಯಾಹ್ನದ ಸುಮಾರಿಗೆ ನಡೆದಿದೆ.

ಘಟನೆಯ ವಿವರ: ಇಲ್ಲಿನ ಶಿವರಾಮ ಪೂಜಾರಿ ಹಾಗೂ ಅರುಣ್ ಮೊಗೇರ್ ಎನ್ನುವವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಒಂದು ಲಕ್ಷ ರೂ. ನಗದು ಹಾಗೂ ಎರಡು ಪವನ್ ಚಿನ್ನದ ಆಭರಣ ಕದ್ದು ಪರಾರಿಯಾಗಿದ್ದಾರೆ.

ಗುರುವಾರ ಮದುವೆ ಇನ್ನಿತರ ಕಾರ್ಯಕ್ರಮಗಳು ಇದ್ದುದರಿಂದ ಅಕ್ಕ ಪಕ್ಕದ ಮನೆಗಳಲ್ಲೂ ಕೂಡ ಜನ ಇದ್ದಿರಲಿಲ್ಲ. ಈ ವೇಳೆ ಕೃತ್ಯ ನಡೆದಿದೆ. ಮನೆಯವರು ಕೆಲಸ ಮುಗಿಸಿ ಮನೆಗೆ ಬಂದ ವೇಳೆ ಕಳ್ಳತನ ನಡೆದಿದ್ದು ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ, ಆರಕ್ಷಕರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor