×
Ad

ಬೈಂದೂರು | ಮನೆಯಲ್ಲಿ ಅಗ್ನಿ ಅವಘಡ: ಕಾರು, ದ್ವಿಚಕ್ರ ವಾಹನ ಬೆಂಕಿಗಾಹುತಿ

Update: 2023-11-23 15:33 IST

ಬೈಂದೂರು, ನ.23: ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕಾರು ಮತ್ತು ದ್ವಿಚಕ್ರ ವಾಹನ ಸುಟ್ಟು ಭಸ್ಮವಾದ ಘಟನೆ ಬೈಂದೂರು ತಾಲೂಕಿನ ಶಿರೂರು ಎಂಬಲ್ಲಿಂದ ವರದಿಯಾಗಿದೆ.

ಇಲ್ಲಿನ ಬುಖಾರಿ ಕಾಲನಿಯ ಸಿನಾ ಫರ್ಹಿನ್ ಎಂಬವರಿಗೆ ಸೇರಿದ ಮನೆಯಲ್ಲಿ ಬುಧವಾರ ತಡರಾತ್ರಿ 1:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಮನೆಯ ಹಾಲ್ ಕೂಡಾ ಸಂಪೂರ್ಣ ಹಾನಿಗೀಡಾಗಿದೆ.

ಬೆಂಕಿಯಿಂದ ಮನೆಗೆ ತಾಗಿಕೊಂಡಿರುವ ಶೆಡ್ ನಲ್ಲಿ ನಿಲ್ಲಿಸಿದ್ದ ಕಾರು ಮತ್ತು ಬೈಕ್ ಸುಟ್ಟು ಕರಕಲಾಗಿದೆ. ಮನೆಯೊಳಗೆ ಅಳವಡಿಸಿದ್ದ ಏರ್ ಕಂಡಿಶನರ್ ಸುಟ್ಟು ಹೋಗಿದ್ದಲ್ಲದೆ, ಮನೆಯ ಗೋಡೆ, ಮತ್ತು ಪೈಪ್ ಲೈನ್, ಕಿಟಕಿ ಹಾಗೂ ಗಾಜುಗಳಿಗೆ ಮತ್ತು ಕೋಣೆಯಲ್ಲಿದ್ದ ಮರದ ಮಂಚ, ಬೆಡ್ ಗೆ ಹಾನಿಯುಂಟಾಗಿದೆ. ಅಂದಾಜು 16,70,000 ರೂ. ನಷ್ಟ ಉಂಟಾಗಿದೆ ಎಂದು ಮನೆಯವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಬೆಂಕಿ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News