×
Ad

ಅಂಗಡಿಯಿಂದ ನಗದು ಕಳ್ಳವು: ದೂರು

Update: 2023-07-21 22:06 IST

ಮಂಗಳೂರು,ಜು.21:ನಗರದ ಭವಂತಿ ಸ್ಟ್ರೀಟ್‌ನ ‘ದೂಜ ಪೂಜಾರಿ’ ಬಟ್ಟೆ ಅಂಗಡಿಯ ಬೀಗ ಒಡೆದು 20 ಸಾವಿರ ರೂ. ಕಳವುಗೈದಿರುವ ಬಗ್ಗೆ ಅಕ್ಷಯ ಕುಮಾರ್ ಪಿಕೆ ನೀಡಿದ ದೂರಿನಂತೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಗುರುವಾರ ರಾತ್ರಿ ವ್ಯಾಪಾರ ಮುಗಿಸಿ ಅಂಗಡಿಯ ಬಾಗಿಲು ಮುಚ್ಚಿ ಮನೆಗೆ ಹೋಗಿದ್ದೆ. ಶುಕ್ರವಾರ ಬೆಳಗ್ಗೆ 8ಕ್ಕೆ ತನ್ನ ಪರಿಚಯದ ವ್ಯಕ್ತಿ ಫೋನ್ ಕರೆ ಮಾಡಿ ಅಂಗಡಿಯ ಬೀಗವನ್ನು ಒಡೆದಿರುವುದಾಗಿ ತಿಳಿಸಿದ್ದರು. ಅದರಂತೆ ಅಂಗಡಿಗೆ ತೆರಳಿದಾಗ ಶೆಟರ್ ಬಾಗಿಲಿನ ಬೀಗವನ್ನು ಒಡೆದು ಎದುರುಗಡೆಯ ಗ್ಲಾಸನ್ನು ತುಂಡರಿಸಿ ಒಳ ಪ್ರವೇಶಿಸಿ ಡ್ರವರ್‌ನಲ್ಲಿದ್ದ 20 ಸಾವಿರ ರೂ.ವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ ಎಂದು ಅಕ್ಷಯ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News