ಕಾವೇರಿ ವಿವಾದ: ಕರವೇ ಕಾರ್ಯಕರ್ತರಿಂದ ರಕ್ತದಲ್ಲಿ ಪತ್ರ ಚಳವಳಿ
Update: 2023-10-01 21:40 IST
ಉಡುಪಿ, ಅ.1: ಕಾವೇರಿ ವಿವಾದಕ್ಕೆ ಸಂಬಂಧಿಸಿ ಪ್ರಧಾನ ಮಂತ್ರಿ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆಯ ಕಾರ್ಯಕರ್ತರು ರವಿವಾರ ತಮ್ಮ ರಕ್ತದಲ್ಲಿ ಪತ್ರ ಬರೆದು ಚಳವಳಿ ನಡೆಸಿದರು.
ಕರವೇ ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ತಮ್ಮ ರಕ್ತದಲ್ಲಿ ಪತ್ರ ಬರೆಯುಲ ಮೂಲಕ ಚಳವಳಿಗೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷ ಗೀತಾ ಪಂಗಾಳ. ಉಪಧ್ಯಕ್ಷರಾದ ಕುಶಲಮಿನ್, ಜಿಲ್ಲಾ ಸಲಹೆಗಾರ ಜಯ ಸಾಲಿನ್, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣಕುಮಾರ್, ಜಿಲ್ಲಾ ಕಾರ್ಮಿಕ ಅಧ್ಯಕ್ಷ ಜಯ ಪೂಜಾರಿ, ಪ್ರಮುಖ ರಾದ ಸಂತೋಷ್ ಕುಲಾಲ್, ಸಿದ್ದಣ್ಣ ಎಸ್.ಪೂಜಾರಿ, ಪ್ರಮೋದ್ ಕುಲಾಲ್, ಲಕ್ಷ್ಮಿ ಬಾಯಿ, ಅನುಶ್ರೀ, ದೇವಕಿ ಬಾರ್ಕೂರು, ಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು.