ಬಸ್ಸಿನಲ್ಲಿ ಮಹಿಳೆಯ ಕತ್ತಿನಲ್ಲಿದ್ದ ಸರ ಕಳವು
Update: 2024-09-10 21:42 IST
ಕುಂದಾಪುರ, ಸೆ.10: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಳವಾಗಿರುವ ಘಟನೆ ಸೆ.10ರಂದು ಬೆಳಗ್ಗೆ ನಡೆದಿದೆ.
ಕುಂದಾಪುರ ಮಹಿಳಾ ಮತ್ತು ಮಕ್ಕಳ ಆಹಾರ ಸರಬರಾಜು ಇಲಾಖೆಯಲ್ಲಿ ಖಾಸಗಿಯಾಗಿ ಕೆಲಸ ಮಾಡುತ್ತಿದ್ದ ಕುಂದಬಾ ರಂದಾಡಿ ಗ್ರಾಮದ ಸಾಕು(50) ಎಂಬವರು ಬೆಳಗ್ಗೆ 8ಗಂಟೆಗೆ ಮುಳ್ಳಿಕಟ್ಟೆಯಲ್ಲಿ ಜಯದುರ್ಗಾ ಬಸ್ಸಿಗೆ ಹತ್ತಿ ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ಇಳಿದರು. ಈ ವೇಳೆ ಅವರ ಕುತ್ತಿಗೆಯಲ್ಲಿದ್ದ ಸುಮಾರು 24ಗ್ರಾಂ ಚಿನ್ನದ ಕರಿಮಣಿ ಸರ ಕಳವಾಗಿರು ವುದು ಕಂಡುಬಂತು.
ಬಸ್ಸಿನಲ್ಲಿದ್ದ ಕಳ್ಳರು ಇವರ ಸರವನ್ನು ಕಳವು ಮಾಡಿಕೊಂಡು ಹೋಗಿ ದ್ದಾರೆಂದು ಶಂಕಿಸಲಾಗಿದೆ. ಕಳವಾದ ಚಿನ್ನದ ಮೌಲ್ಯ 1,20,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.