×
Ad

ಪ್ರೊ.ಎಂ.ಎಲ್.ಸಾಮಗರಿಗೆ ಚಿಟ್ಟಾಣಿ ಪ್ರಶಸ್ತಿ

Update: 2023-10-19 19:00 IST

ಉಡುಪಿ, ಅ.19: ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ, ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ ಸಂದರ್ಭದಲ್ಲಿ ನೀಡುತ್ತಿರುವ ಪದ್ಮಶ್ರೀ ರಾಮಚಂದ್ರ ಹೆಗಡೆ ಪ್ರಶಸ್ತಿ ಮತ್ತು ಟಿ.ವಿ.ರಾವ್ ಪ್ರಶಸ್ತಿಗೆ ಈ ವರ್ಷ ಕ್ರಮವಾಗಿ ಹವ್ಯಾಸಿ ಕಲಾ ವಿದ ಪ್ರೊ.ಎಂ.ಎಲ್. ಸಾಮಗ ಮತ್ತು ಹವ್ಯಾಸಿ ಕಲಾವಿದೆ ಬಿ.ಕೆ.ಸುಮತಿ ರಾವ್ ಆಯ್ಕೆಯಾಗಿದ್ದಾರೆ.

ಮುಂದಿನ ನವಂಬರ್ 5ರಿಂದ ನವಂಬರ್ 11ರವರೆಗೆ ಚಿಟ್ಟಾಣಿ ಸಪ್ತಾಹ ಉಡುಪಿ ರಾಜಾಂಗಣದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ನ.11ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಚಿಟ್ಟಾಣಿ ಅಭಿಮಾನಿ ಬಳಗದ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಕಾರ್ಯದರ್ಶಿ ಎಮ್. ಗೋಪಿಕೃಷ್ಣ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಇನ್ನೂ ಮೂರು ಪ್ರಶಸ್ತಿ ಸೇರ್ಪಡೆ: ಈ ನಡುವೆ ಉಡುಪಿಯ ಯಕ್ಷಗಾನ ಕಲಾರಂಗ ಯಕ್ಷಗಾನದ ವಿವಿಧ ಕಲಾವಿದರ ಸ್ಮರಣೆಯಲ್ಲಿ ನೀಡುವ ದತ್ತಿ ಪ್ರಶಸ್ತಿಗೆ ಇನ್ನೂ ಮೂರು ಸೇರ್ಪಡೆಗೊಂಡಿದ್ದು, ಅವುಗಳ ಒಟ್ಟು ಸಂಖ್ಯೆ 23ಕ್ಕೇರಿದೆ. ಈ ಪ್ರಶಸ್ತಿಗಳು ತಲಾ 20,000ರೂ.ನಗದು ಪುರಸ್ಕಾರವನ್ನು ಒಳಗೊಂಡಿದೆ.

ಈ ವರ್ಷ ಪ್ರಸಿದ್ಧ ಸ್ತ್ರೀವೇಷಧಾರಿ ಕಡಂದೇಲು ಪುರುಷೋತ್ತಮ ಭಟ್ಟರ ನೆನಪಿನಲ್ಲಿ ಅವರ ಪುತ್ರ ವೆಂಕಟರಮಣ ಭಟ್, ಪ್ರಸಿದ್ಧ ಭಾಗವತ ಕಡತೋಕ ಕೃಷ್ಣ ಭಾಗವತರ ನೆನಪಿನಲ್ಲಿ ಅವರ ಪುತ್ರ ಎಂ.ಕೆ.ಭಟ್ ಹಾಗೂ ನಮ್ಮ ಕುಡ್ಲ ವಾಹಿನಿಯ ಸಂಸ್ಥಾಪಕ ಬಿ.ಪಿ.ಕರ್ಕೇರ ನೆನಪಿನಲ್ಲಿ ಅವರ ಪುತ್ರ ಲೀಲಾಕ್ಷ ಕರ್ಕೇರ ಮತ್ತು ಸಹೋದರರು ಪ್ರಶಸ್ತಿಗಳನ್ನು ನೀಡುತಿ ದ್ದಾರೆ ಎಂದು ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

ಈ ಬಾರಿಯ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 18ರ ಶನಿವಾರ ಶ್ರೀಕ್ಷೇತ್ರ ಕಟೀಲಿನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News