×
Ad

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಸಾಲಿಹಾತ್ ವಿದ್ಯಾರ್ಥಿಗಳ ಸಾಧನೆ

Update: 2023-11-10 19:52 IST

ಉಡುಪಿ: ಗರಡಿಮಜಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಸಾಂಸಕ್ರತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ.

ಒಟ್ಟು 20 ಶಾಲೆಗಳ ವಿದ್ಯಾರ್ಥಿಗಳು ಈ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದರು. ಕಿರಿಯ ಪ್ರಾಥಮಿಕ ವಿಭಾಗ- ಛದ್ಮವೇಷ ಪ್ರಥಮ ಸ್ಥಾನ-ಒವೈಸ್, ಧಾರ್ಮಿಕ ಕಂಠಪಾಠ ಪ್ರಥಮ ಸ್ಥಾನ- ಸಿದ್ರ ಮರಿಯಮ್, ಚಿತ್ರಕಲೆ ತೃತೀಯ ಸ್ಥಾನ- ಅಮೀರ್ ಹಂಝ.

ಹಿರಿಯ ಪ್ರಾಥಮಿಕ ವಿಭಾಗ- ಅರೇಬಿಕ್ ಧಾರ್ಮಿಕ ಕಂಠಪಾಠ ಪ್ರಥಮ ಸ್ಥಾನ- ಅಬ್ದುಲ್ ರೆಹ್ಮಾನ್, ಹಿಂದಿ ಕಂಠಪಾಠ ದ್ವಿತೀಯ ಸ್ಥಾನ-ಉಮ್ಮೆ ಹನಿ, ಮಿಮಿಕ್ರಿ ತೃತೀಯ- ಮುಹಮ್ಮದ್ ಅಫಾನ್. ಪ್ರೌಢ ಶಾಲಾ ವಿಭಾಗ: ಇಂಗ್ಲಿಷ್ ಭಾಷಣ ಪ್ರಥಮ- ಸಾರಾ ಮುಕ್ತಾರ್, ಗಝಲ್ ಗಾಯನ ಪ್ರಥಮ- ಸುಬೀರ ಬಾನು, ರಂಗೋಲಿ ಪ್ರಥಮ- ಝೈನ ಫಾತಿಮ, ಅರೇಬಿಕ್ ಧಾರ್ಮಿಕ ಕಂಠಪಾಠ ಪ್ರಥಮ- ಮುಹಮ್ಮದ್ ಫೈಸಲ್, ಕವ್ವಾಲಿ ಪ್ರಥಮ ಸ್ಥಾನ-ರಿಾ ಮೆಹೆಕ್ ಮತ್ತು ತಂಡ, ಚಿತ್ರಕಲೆ ದ್ವಿತೀಯ ಸ್ಥಾನ- ಆಯೆಷಾ ಮನ್ಹ, ಛದ್ಮವೇಷ ದ್ವಿತೀಯ ಸ್ಥಾನ-ಅಸ್ಮಿಯ ಬೇಗಮ್, ಮಿಮಿಕ್ರಿ ದ್ವಿತೀಯ ಸ್ಥಾನ- ಮುಹಮ್ಮದ್ ಅಸ್ಫಾನ್, ಜಾನಪದ ಗೀತೆ ದ್ವಿತೀಯ ಸ್ಥಾನ-ಶೈಮಾ ನಾಝ್‌ಎನ್., ಭಾವಗೀತೆ ತೃತೀಯ ಸ್ಥಾನ- ಅರ್ಷಿಯ, ಹಿಂದಿ ಭಾಷಣ ತೃತೀಯ ಸ್ಥಾನ- ಅನ್ಫಾಲ್ ತಕ್ದೀಸ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News