×
Ad

ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ತರಬೇತಿ

Update: 2023-11-20 22:00 IST

ಉಡುಪಿ, ನ.20: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕೇಂದ್ರ ಲೋಕಸೇವಾ ಆಯೋಗದವರು ನಡೆಸಲಿರುವ ಐಎಎಸ್ ಹಾಗೂ ಕರ್ನಾಟಕ ಲೋಕ ಸೇವಾ ಆಯೋಗದವರು ನಡೆಸಲಿರುವ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರಕಚೇರಿಯಲ್ಲಿ ನೀಡಲಾಗುವುದು.

ಆಸಕ್ತರು ನವೆಂಬರ್ 24ರ ಒಳಗೆ ಬೆಳಗ್ಗೆ 10ರಿಂದ ಸಂಜೆ 4:30ರವರೆಗೆ ದೂ.ಸಂಖ್ಯೆ: 0821-2515944 ಅನ್ನು ಸಂಪರ್ಕಿಸಿ, ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದು ಕ.ರಾ.ಮು. ಕುಲಸಚಿವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News