×
Ad

ಉಡುಪಿ ನಗರದ ಮುಖ್ಯ ರಸ್ತೆಯಲ್ಲಿ ಮೃತ್ಯುಕೂಪ !

Update: 2023-07-19 19:50 IST

ಉಡುಪಿ, ಜು.19: ನಗರದ ಸಿಟಿಸೆಂಟರ್ ಸಮೀಪ ಹಾದುಹೋಗುವ ಮುಖ್ಯ ರಸ್ತೆಯಲ್ಲಿ ಮೃತ್ಯುಕೂಪವೊಂದು ನಿರ್ಮಾಣವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಅಪಾಯದ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿ ಅಪಾಯವನ್ನು ನಿಯಂತ್ರಿಸುವ ಪ್ರಯತ್ನ ಮಾಡಲಾಗಿದೆ. ಈ ರಸ್ತೆಯಲ್ಲಿ ಗುಂಡಿ ಉದ್ಭವಗೊಂಡು ತಿಂಗಳೆರಡು ಕಳೆದಿವೆ. ಆದರೂ ದುರಸ್ಥಿ ಪಡಿಸುವ ಕಾರ್ಯ ನಡೆದಿಲ್ಲ. ನಗರಸಭೆ ತಕ್ಷಣ ರಸ್ತೆ ಹೊಂಡ ಮುಚ್ಚಿಸುವಂತೆ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಆಗ್ರಹಸಿದ್ದಾರೆ.

ಇಲ್ಲಿಯ ಗುಂಡಿಯಲ್ಲಿ ಮಳೆಯ ನೀರು ಹರಿಯುವಾಗ ಬಿದ್ದರೆ, ಬಿದ್ದ ವ್ಯಕ್ತಿ ಒಳಚರಂಡಿಯ ಮೂಲಕ ಕೊಚ್ಚಿ ಹೋಗಬಹುದು. ಸುರಂಗ ಮಾರ್ಗದಂತೆ ಇಲ್ಲಿ ಗುಂಡಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News