ಶೇ.50 ರಿಯಾಯತಿಯಲ್ಲಿ ಡಯಾಲಿಸಿಸ್ ಚಿಕಿತ್ಸೆ: ಜ.25ರಂದು ಎರಡನೇ ಯೋಜನೆಗೆ ಚಾಲನೆ
ಉಡುಪಿ, ಜ.19: ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿರುವ, ದ.ಕ. ಜಿಲ್ಲೆಯ ಅರ್ಹ ಬಡರೋಗಿಗಳಿಗಾಗಿ ಶೇ.50 ರಿಯಾಯತಿ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಸೊಸೈಟಿ ಆಫ್ ವಿನ್ಸೆಂಟ್ ದಿ ಪೌಲ್ ಸಂಘಟನೆ ತನ್ನ ಶತಮಾನೋತ್ಸವ ಆಚರಣೆಯ ಪ್ರಯುಕ್ತ ಜೋಸೆಫ್ ಮಿನೇಜಸ್ ಸಾಸ್ತಾನ ನೇತೃತ್ವದಲ್ಲಿ ಮತ್ತು ಫ್ರೀಡಾ ರೇಗೊ ಮತ್ತು ಜಾನೆಟ್ ಫೆರ್ನಾಂಡಿಸ್ ಸಹಕಾರದೊಂದಿಗೆ ಟ್ರಿನಿಟಿ ಮೆಡಿಕೇರ್ ಸರ್ವಿಸ್ ಎರಡನೇ ಯೋಜನೆಯ ಉದ್ಘಾಟನೆ ಮಂಗಳೂರು ಫಾರ್ದ ಮುಲ್ಲರ್ಸ್ ಕನ್ವೆಶ್ನನ್ ಸೆಂಟರ್‌ನಲ್ಲಿ ಜ.25ರಂದು ಬೆಳಗ್ಗೆ 10.50ಕ್ಕೆ ನಡೆಯಲಿದೆ.
ಬೆಳಿಗ್ಗೆ 9.30ಕ್ಕೆ ಪವಿತ್ರ ಬಲಿಪೂಜೆ ನಡೆಯಲಿದ್ದು, ಬಳಿಕ ಫಾದರ್ ಮುಲ್ಲರ್ಸ್ ಕನ್ವೆಶನ್ ಸೆಂಟರ್‌ನಲ್ಲಿ ಯೋಜನೆಗೆ ಚಾಲನೆ ದೊರಕಲಿದ್ದು ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಪೀಟರ್ ಪೌಲ್ ಸಲ್ಡಾನಾ ವಹಿಸಲಿರುವರು. ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಯೋಜನೆ ಆರಂಭವಾಗಿದ್ದು ಕಿಡ್ನಿ ಡಯಾಲಿಸ್ ಪ್ರಯೋಜನ ವನ್ನು ರೋಗಿಗಳು ಪಡೆಯುತ್ತಿದ್ದಾರೆ.
ದಕ ಜಿಲ್ಲಾ ವ್ಯಾಪ್ತಿಯಲ್ಲಿ ಡಯಾಲಿಸಿಸ್ ಅಗತ್ಯವಿರುವ ಬಡ ರೋಗಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸ ಬಹುದು. ಈ ಯೋಜನೆ ಎಲ್ಲಾ ಧರ್ಮ ಮತ್ತು ವರ್ಗದವರಿಗೂ ಕೂಡ ಲಭ್ಯವಾಗಿದ್ದು ಸ್ಥಳೀಯ ಚರ್ಚಿನ ವಿನ್ಸೆಂಟ್ ದಿ ಪೌಲ್ ಘಟಕದ ಶಿಫಾರಸು ಅರ್ಜಿಯೊಂದಿಗೆ ಯೋಜನೆಯ ಪ್ರಯೋಜನ ಪಡೆಯಲು ಅವಕಾಶವಿದೆ. ಡಯಾಲಿಸಿಸ್ ರೋಗಿಗಳಿಗೆ ಯೋಜನೆಗೆ ನೊಂದಣಿಯಾದ ಬಳಿಕ ಅಧಿಕೃತ ಗುರುತು ಪತ್ರ ನೀಡಲಾಗುತ್ತಿದ್ದು ಅದರ ಆಧಾರದಲ್ಲಿ ನಿರಂತರವಾಗಿ ಶೇ.50 ರಿಯಾಯತಿ ದರದಲ್ಲಿ ಚಿಕಿತ್ಸೆಯನ್ನು ನಿಗದಿಪಡಿಸಿದ ಆಸ್ಪತ್ರೆಯಲ್ಲಿ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.