ಕೆರೆಗೆ ಬಿದ್ದು ಮೃತ್ಯು
Update: 2023-09-07 21:29 IST
ಮಣಿಪಾಲ, ಸೆ.7: ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹೆರ್ಗಾ ಗ್ರಾಮದ ಮೇಲ್ಮನೆ ಬಳಿ ನಡೆದಿದೆ.
ಮೃತರನ್ನು ರತ್ನಾಕರ ಪೂಜಾರಿ(55) ಎಂದು ಗುರುತಿಸಲಾಗಿದೆ. ಇವರು ಸೆ.5ರಂದು ರಾತ್ರಿಯಿಂದ ಸೆ.7ರ ಮಧ್ಯಾಹ್ನ ಮಧ್ಯಾವಧಿಯಲ್ಲಿ ಕೆರೆಯ ಬಳಿ ನಡೆದು ಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.