ಜು.17ರಂದು ಜಿಲ್ಲಾ ಉಸ್ತುವಾರಿ ಸಚಿವರು ಉಡುಪಿಗೆ ಭೇಟಿ
ಉಡುಪಿ, ಜ.16: ಜ.17 ಮತ್ತು 18ರಂದು ನಡೆಯುವ ಶೀರೂರು ಪರ್ಯಾಯ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರೂ, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ಶನಿವಾರ ಉಡುಪಿಗೆ ಆಗಮಿಸಲಿದ್ದು ಎರಡು ದಿನಗಳ ಕಾಲ ನಗರದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಶನಿವಾರ ಬೆಳಗ್ಗೆ 9:55ಕ್ಕೆ ಬೆಂಗಳೂರಿನಿಂದ ಹೊರಟು 10:55ಕ್ಕೆ ಬಜಪೆ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಸಚಿವೆ, 12:30ಕ್ಕೆ ಉಡುಪಿಗೆ ಆಗಮಿ ಸಲಿದ್ದಾರೆ. ಅಪರಾಹ್ನ 3:00ಕ್ಕೆ ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಸ್ಕರ್ ಫೆರ್ನಾಂಡೀಸ್ ಅಭಿಮಾನಿ ಬಳಗದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಬಳಿಕ ಸಂಜೆ 7:00ಗಂಟೆಗೆ ಮದರ್ ಆಫ್ ಸಾರೋಸ್ ಚರ್ಚ್ ಆವರಣದಲ್ಲಿ ನಡೆಯುವ ದೇಹದಾರ್ಢ್ಯ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಉಡುಪಿಯಲ್ಲಿ ವಾಸ್ತವ ಮಾಡುವರು.
ಜ.18ರ ರವಿವಾರ ಮುಂಜಾನೆ 5:30ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶೀರೂರು ಪರ್ಯಾಯದ ಪ್ರಯುಕ್ತ ನಡೆಯುವ ಪರ್ಯಾಯ ದರ್ಬಾರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಅಪರಾಹ್ನ 12:00ಗಂಟೆಗೆ ಉಡುಪಿ ಕಡೆಕಾರು ಗ್ರಾಪಂನ ನೂತನ ಕಚೇರಿ ಹಾಗೂ ಅಂಗನವಾಡಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿ ಸಿದ ಬಳಿಕ ಸಂಜೆ 4 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವರು.