×
Ad

ನಾಟಕ ಕಲಾವಿದ ಅಶೋಕ್ ಶಾನುಭಾಗ್ ಕುಂದಾಪುರ ನಿಧನ

Update: 2023-12-09 11:39 IST

ಕುಂದಾಪುರ, ಡಿ.9: ಕುಂದಾಪುರದ ಪ್ರಸಿದ್ಧ ರೂಪಕಲಾ ನಾಟಕ ತಂಡದ 'ಮೂರುಮುತ್ತು' ಖ್ಯಾತಿಯ ಅಶೋಕ್ ಶಾನುಭಾಗ್(54) ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಮೂರುಮುತ್ತು, ಅವನಲ್ಲ ಇವನು, ಪಾಪ ಪಾಂಡು, ಅಳುವುದೋ ನಗುವುದೋ, ರಾಮಕೃಷ್ಣ ಗೋವಿಂದ, ಸುಸೈಡ್ ಸುಂದರ ಸಹಿತ ಹಲವಾರು ನಾಟಕಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮೂರು ಮುತ್ತು ನಾಟಕದಲ್ಲಿನ 'ಕಿಂಕೀ ರಮಾನಾಥ' ಪಾತ್ರದಿಂದ ಗಮನಸೆಳೆದಿದ್ದರು.

ಇವರ ಅಗಲಿಕೆಯ ಸುದ್ದಿ ಅಪಾರ ಅಭಿಮಾನಿಗಳಿಗೆ ದುಃಖ ಉಂಟುಮಾಡಿದೆ. ಮೃತರ ಅಂತ್ಯ ಸಂಸ್ಕಾರ ಶನಿವಾರ ಬೆಳಗ್ಗೆ ಕುಂದಾಪುರದಲ್ಲಿ ನಡೆಯಲಿದೆ. ಕೆಲ ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News