×
Ad

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಸಿಲ್ವರ್ ಫೆಸ್ಟ್‌ಗೆ ಚಾಲನೆ

Update: 2023-09-17 19:29 IST

ಉಡುಪಿ, ಸೆ.17: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಇದರ ಉಡುಪಿ ಶೋರೂಂನಲ್ಲಿ ಹೊಚ್ಚ ಹೊಸದಾದ ಬೆಳ್ಳಿಯ ಆಭರಣದ ಪ್ರದರ್ಶನ ಸಿಲ್ವರ್ ಫೆಸ್ಟ್‌ಗೆ ಇಂದು ಚಾಲನೆ ನೀಡಲಾಯಿತು.

ಸೆ.25ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಬೆಳ್ಳಿಯ ಆಭರಣಗಳು ಮತ್ತು ಇತರೆ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದೆ. ಗ್ರಾಹಕರಿಗೆ ಸಾಂಪ್ರದಾಯಿಕ ವಸ್ತುಗಳು ಮತ್ತು ಆಭರಣಗಳಿಂದ ತೊಡಗಿ ಆಧುನಿಕ ಹಾಗೂ ಕನಿಷ್ಟ ತುಣುಕುಗಳ ಖಚಿತ ಗುಣಮಟ್ಟದ ಸಿಲ್ವರ್‌ಗಳು ಇಲ್ಲಿವೆ.

ಪ್ರದರ್ಶನದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅನ್ವಿತಾ ಶೆಟ್ಟಿ, ತ್ರಾಷಾ ಶೆಟ್ಟಿ ಬೆಳ್ಳಿಯ ಆಭರಣಗಳನ್ನು ಅನಾವರಣ ಗೊಳಿಸಿದರು. ಶಾಖಾ ವ್ಯವಸ್ಥಾಪಕ ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್, ಮುಸ್ತಫಾ ಎ.ಕೆ., ತಂಝೀಮ್ ಶಿರ್ವ, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಮಲಬಾರ್ ಗೋಲ್ಡ್ ತನ್ನ ಎಲ್ಲಾ ಆಭರಣಗಳಿಗೆ ಜೀವನಪರ್ಯಂತ ಉಚಿತ ನಿರ್ವಹಣೆ, ಒಂದು ವರ್ಷ ಉಚಿತ ವಿಮೆ ಸಂರಕ್ಷಣೆ, ಪಾರದರ್ಶಕ ಮತ್ತು ವಿವರವಾದ ದರದ ಪಟ್ಟಿ ಹಾಗು ಬೈಬ್ಯಾಕ್ ಗ್ಯಾರೆಂಟಿಯನ್ನು ಸಾದರಪಡಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News