ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಉಡುಪಿಗೆ ಪ್ರಥಮ ಬಹುಮಾನ
Update: 2023-10-27 20:16 IST
ಉಡುಪಿ, ಅ.27: ದಸರಾ ಮಹೋತ್ಸವದಂಗವಾಗಿ ಕಳೆದ ಅ.24ರಂದು ಮೈಸೂರಿನಲ್ಲಿ ನಡೆದ ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆಯಲ್ಲಿ ಉಡುಪಿ ಜಿಲ್ಲೆಯ ತಂಡ ಪ್ರಥಮ ಬಹುಮಾನವನ್ನು ಗೆದ್ದುಕೊಂಡಿದೆ.
ಮೆರವಣಿಗೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಸಿ.ಚಂದ್ರನಾಯ್ಕ್ ನೇತೃತ್ವದ ಹೆಗ್ಗುಂಜೆ ಶ್ರೀ ಮಲ್ಲಿಕಾರ್ಜುನ ಕುಡುಬಿ ಹೋಳಿ ಜಾನಪದ ಕಲಾಸಂಘವು ಗುಮಟೆ ನೃತ್ಯ ಪ್ರದರ್ಶಿಸಿದ್ದು, ಪ್ರಥಮ ಸ್ಥಾನದೊಂದಿಗೆ 15,000 ರೂ. ನಗದು ಬಹು ಮಾನ ಪಡೆದಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.