ಕಾರ್ಕಳ: ಶಾಲಾ ತರಗತಿ ಕೋಣೆ ನಿರ್ಮಾಣಕ್ಕೆ ಶಿಲಾನ್ಯಾಸ
Update: 2025-05-21 23:59 IST
ಕಾರ್ಕಳ: ಒಸಾಟ್ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ 119 ನೇ ಪ್ರಾಜೆಕ್ಟ್ ಅನ್ನು ದಾನಿಗಳಾದ ರಾಕುಟೆನ್ ಇಂಡಿಯಾ ಎಂಟರ್ಪೈಸ್ ಪ್ರೈ ಲಿ ಬೆಂಗಳೂರು ಇವರ ಸಹಕಾರದೊಂದಿಗೆ ಕಾರ್ಕಳ ಹೊಸ್ಮಾರು, ಈದು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗಕ್ಕೆ 4 ತರಗತಿ ಕೋಣೆಗಳನ್ನು ನಿರ್ಮಿಸಲು ಶಿಲಾನ್ಯಾಸ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಎಸ್ ಡಿಎಂಸಿ ಅಧ್ಯಕ್ಷರಾದ ಜಗದೀಶ್ ಅಂಚನ್, ಈದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾನಂದ ಪೂಜಾರಿ, ಕರ್ನಾಟಕ ಪಬ್ಲಿಕ್ ಸ್ಕೂಲ್, ಉಪ ಪ್ರಾಂಶುಪಾಲರಾದ ದಿವಾಕರ ಹೆಗ್ಡೆ, ಹಿರಿಯರಾದ ಪುರುಷೋತ್ತಮ ರಾವ್, ಪ್ರಾಥಮಿಕ ವಿಭಾಗದ ವಿಜಯ ಕುಮಾರ್ ಪಿ, ಭೌತಿಕ ಸೌಲಭ್ಯ ಸಮಿತಿಯ ಅಧ್ಯಕ್ಷರಾದ ರಮೇಶ್ ಕೋಟ್ಯಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್, ಹಾಗೂ ಎಸ್ ಡಿ ಎಂ ಸಿ ಸದಸ್ಯರು, ಪಂಚಾಯತ್ ಸದಸ್ಯರು, ಪೋಷಕರು, ಹಾಗೂ ಶಿಕ್ಷಕ ಉಪಸ್ಥಿತರಿದ್ದರು.