ಸೌಹಾರ್ದ ಫುಟ್‌ಬಾಲ್ ಪಂದ್ಯಾಟ: ಉಡುಪಿ ಸುಲ್ತಾನ್ ಗೋಲ್ಡ್‌ಗೆ ಟ್ರೋಫಿ
Update: 2023-08-21 19:44 IST
ಉಡುಪಿ, ಆ.21: ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪ್ರಯುಕ್ತ ಉಡುಪಿಯ ಸುಲ್ತಾನ್ ಗೋಲ್ಡ್ ಮತ್ತು ಮಲಬಾರ್ ಗೋಲ್ಡ್ ತಂಡದ ಮಧ್ಯೆ ನಡುವೆ ಸೌಹಾರ್ದ ಫುಟ್‌ಬಾಲ್ ಪಂದ್ಯಾಟ ಉಡುಪಿ ಟ್ರೋಫಿ ಇತ್ತೀಚೆಗೆ ಮಣಿಪಾಲ ದಲ್ಲಿ ನಡೆಯಿತು.
ಪಂದ್ಯಾಟದಲ್ಲಿ ಸುಲ್ತಾನ್ ಗೋಲ್ಡ್ ತಂಡವು 3-2 ಅಂತರದಲ್ಲಿ ಉಡುಪಿ ಟ್ರೋಫಿಯನ್ನು ಗೆದ್ದುಕೊಂಡಿತು. ಟ್ರೋಫಿಯನ್ನು ಮಲಬಾರ್ ಗೋಲ್ಡ್‌ನ ಕಪ್ತಾನ ಸರ್ಫುದ್ದೀನ್, ಸುಲ್ತಾನ್ ಗೋಲ್ಡ್‌ನ ಕಪ್ತಾನ ಬಾತೀಶ್ ಅವರಿಗೆ ನೀಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಸುಲ್ತಾನ್ ಗೋಲ್ಡ್ ಉಡುಪಿ ಶಾಖೆಯ ಬಿ.ಎಂ.ಬಿಜು ಮ್ಯಾಥ್ಯು, ಸೇಲ್ಸ್ ಮೆನೇಜರ್ ಇಲಿಯಾಸ್ ಬಿ., ಫ್ಲೋರ್ ಮೆನೇಜರ್ ಸಿದ್ದೀಕ್ ಹಸನ್, ಸುರತ್ಕಲ್ ಶಾಖೆಯ ಮನೇಜರ್ ನಝೀರ್ ಅಡ್ಡೂರು, ಡೈಮಂಡ್ ಇಂಚಾರ್ಜ್ ವಾಹಿದ್ ಪಿ.ಎಂ., ವಾಚ್ ಇಂಚಾರ್ಜ್ ಅಬ್ದುಲ್ ರಶೀದ್ ಮುಲ್ಕಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.