×
Ad

ಉದ್ಯಾವರ ರಾಷ್ಟ್ರೀಯ ಹೆದ್ದಾರಿ ಬಳಿ ಕಸದ ರಾಶಿ!

Update: 2023-10-07 21:00 IST

ಉಡುಪಿ: ಮಹಾರಾಷ್ಟ್ರ ನೋಂದಾವಣಿಯ ಲಾರಿಗಳ ಮೂಲಕ ರಾಶಿ ರಾಶಿ ಕಸವನ್ನು ಉದ್ಯಾವರ ಗುಡ್ಡೆಯಂಗಡಿಯ ರಾಷ್ಟ್ರೀಯ ಹೆದ್ದಾರಿ  ಬಳಿ ಸುರಿಸಿ ಹೋಗಿರುವ ಘಟನೆ ಇಂದು ಮುಂಜಾನೆ ನಡೆದಿದೆ.

ಎರಡು ಲಾರಿಗಳಲ್ಲಿ ತಂದ ಕಸದ ರಾಶಿಯನ್ನು ಹೆದ್ದಾರಿ ಬದಿಯಲ್ಲಿಯೇ ಸುರಿಸಿ ಹೋಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬ ಆಕ್ಷೇಪಿಸಿ ದಕ್ಕೆ ಲಾರಿಯವರು ಬೈದು ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

ಸ್ಥಳಕ್ಕೆ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ, ಮಾಜಿ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ರಿಯಾಜ್ ಪಳ್ಳಿ ಮೊದಲಾದವರು ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News