×
Ad

ತಿರುವನಂತಪುರದಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಜಯಂಟ್ಸ್ ಉಡುಪಿಗೆ ಪ್ರಶಸ್ತಿ

Update: 2024-01-19 18:45 IST

ಉಡುಪಿ : ತಿರುವನಂತಪುರದ ಅಲ್ ಸಾಜ್ ಕನ್ವೆನ್ಶಲ್ ಹಾಲ್ನಲ್ಲಿ ನಡೆದ 3 ದಿನಗಳ ಅಂತರಾಷ್ಟ್ರೀಯ ಜಯಂಟ್ಸ್ ಸಮ್ಮೇಳನದಲ್ಲಿ ಉಡುಪಿಯ ಜಯಂಟ್ಸ್ ಗ್ರೂಪ್ಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಎಂ.ಇಕ್ಬಾಲ್ ಮನ್ನಾ ಅವರ ನೇತೃತ್ವದ ಉಡುಪಿ ಜಯಂಟ್ಸ್ ಕಳೆದ ತಿಂಗಳು ಎರಡು ದಿನಗಳ ಮಾಜಿ ಅಧ್ಯಕ್ಷರ ಸಭೆಯನ್ನು ಆಯೋಜಿಸಿದ್ದಕ್ಕಾಗಿ ಈ ಪ್ರಶಸ್ತಿ ಸಂದಿದೆ.

ಜಯಂಟ್ಸ್ ಇಂಟರ್ ನ್ಯಾಷನಲ್ ನ ಅಧ್ಯಕ್ಷೆ ಶೈನಾ, ಉಪಾಧ್ಯಕ್ಷ ನೂರುದ್ದೀನ್ ಹಾಗೂ ಕೇಂದ್ರ ಸಮಿತಿ ಸದಸ್ಯ ದಿನಕರ್ ಅಮೀನ್, ಉಡುಪಿ ಜೈಂಟ್ಸ್ ಪದಾಧಿಕಾರಿಗಳಾದ ವಿನ್ಸೆಂಟ್ ಸಲ್ಡಾನಾ, ರೋಶನ್ ಬಲ್ಲಾಳ್, ವಾದಿರಾಜ್, ರಾಜೇಶ್ ಶೆಟ್ಟಿ, ಮತ್ತು ದಿವಾಕರ ಪೂಜಾರಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News