×
Ad

ಸೌಡ: ಅಂಬೇಡ್ಕರ್ ವಸತಿ ಶಾಲೆ ಪ್ರದೇಶಕ್ಕೆ ಗೋಪಾಲ ಪೂಜಾರಿ ಭೇಟಿ

Update: 2024-08-16 21:29 IST

ಕುಂದಾಪುರ, ಆ.16: ಶಂಕರನಾರಾಯಣದ ಸೌಡ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮಾದರಿ ವಸತಿ ಶಾಲೆ ಪ್ರದೇಶಕ್ಕೆ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಡವರು, ದಲಿತ ಮಕ್ಕಳು ಓದಿ ಮುಖ್ಯವಾಹಿನಿಗೆ ಬರಬೇಕೆಂಬುದು ವಸತಿ ಶಾಲೆಯ ಮುಖ್ಯ ಉದ್ದೇಶ. ಇಲ್ಲಿ ವಸತಿ ಶಾಲೆ ಮಾಡುವ ಜಾಗದ ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲವಾದಂತಿದೆ. ಮೂಲ ಯೋಜನೆಯಲ್ಲಿ 24 ಕೋಟಿ ಅನುದಾನ ಮಂಜೂರಾಗಿದ್ದು ಇಷ್ಟಕ್ಕೆ ಕಾಮಗಾರಿ ಪೂರ್ಣವಾಗುತ್ತದೆಯೇ ಎಂಬ ಬಗ್ಗೆ ಸಂಬಂಧಿತ ಇಂಜಿನಿಯರ್ ಸಭೆ ಕರೆದು ಚರ್ಚೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಕ್ರಮವಹಿಸಲು ಈ ವಸತಿ ಶಾಲೆ ಕಟ್ಟಡಕ್ಕೆ ಅಗತ್ಯ ಬದಲಾವಣೆ ಬಗ್ಗೆ ತಾಂತ್ರಿಕ ಇಲಾಖೆಯ ವರದಿ ಅವಶ್ಯ ಎಂದರು.

ಈ ಸಂದರ್ಭದಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷ ಶೆಟ್ಟಿ, ತಾ.ಪಂ ಮಾಜಿ ಸದಸ್ಯರಾದ ವಾಸುದೇವ ಪೈ, ಶಂಕರನಾರಾಯಣ ಗ್ರಾ.ಪಂ ಮಾಜಿ ಅಧ್ಯಕ್ಷರಾದ ಸದಾಶಿವ ಶೆಟ್ಟಿ, ಶಾಡಿಗುಂಡಿ ರಾಜೀವ ಶೆಟ್ಟಿ, ಹಾಲಿ ಸದಸ್ಯರಾದ ಗುರುದತ್ ಶೇಟ್, ಸುಧಾಕರ ಶೆಟ್ಟಿ ಉಳ್ಳೂರು, ಕಾಂಗ್ರೆಸ್ ಹಿರಿಯ ಮುಖಂಡರಾದ ಸಂಪಿಗೇಡಿ ಸಂಜೀವ ಶೆಟ್ಟಿ, ಶ್ರೀನಿವಾಸ ಸೌಡ, ಬಾಲಚಂದ್ರ ಕುಲಾಲ್, ರಾಘವೇಂದ್ರ ಕೊಠಾರಿ, ಎ.ಪಿ ಶೆಟ್ಟಿ, ರಾಮಚಂದ್ರ ದೇವಾಡಿಗ, ಅನಿತಾ ಶೆಟ್ಟಿ, ಸಂತೋಷ್ ಶೆಟ್ಟಿ ಹೊಸಂಗಡಿ, ಮಂಜುನಾಥ ಶೆಟ್ಟಿ ಗುಡಿಬೆಟ್ಟು, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಶೇಷು ನಾಯ್ಕ್ ಮೊದಲಾದವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News