ಹೆಬ್ರಿ | ಅನಾರೋಗ್ಯ ಪೀಡಿತರಿಗೆ ಸಹಾಯಧನ ಹಸ್ತಾಂತರ
ಹೆಬ್ರಿ, ಡಿ.7: ಟೀಮ್ ಮಲೆನಾಡು ಹ್ಯೂಮೆನೀಟರಿಯನ್ ಟ್ರಸ್ಟ್ ಬೆಳ್ವೆ ಇದರ ವತಿಯಿಂದ ಬೆಳ್ವೆ ಆರ್ಡಿ ಗೋಳಿಯಂಗಡಿ ಲಯನ್ಸ್ ಕ್ಲಬ್ ನ ಸಹಯೋಗದೊಂದಿಗೆ ಅನಾರೋಗ್ಯ ಪೀಡಿತರಿಗೆ ಸಹಾಯಧನ ಹಸ್ತಾಂತರ ಕಾರ್ಯಕ್ರಮ ಬೆಳ್ವೆ ಶ್ರೀಸಂದೇಶ್ ಕಿಣಿ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಬೆಳ್ವೆ ಟೀಮ್ ಮಲೆನಾಡು ಹ್ಯೂಮ್ಯಾನಿಟೇರಿಯನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಅಜೆಕಾರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಜಯರಾಮ್ ಶೆಟ್ಟಿ, ಕೊಕ್ಕರ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹರ್ಷ ಪೂಜಾರಿ, ನಮ್ಮ ನಾಡ ಒಕ್ಕೂಟ ಹೆಬ್ರಿ ಅಧ್ಯಕ್ಷ ಅನ್ಸಾರ್ ಹೊಸಂಗಡಿ, ಉಪಾಧ್ಯಕ್ಷ ಶರೀಫ್ ಸಾಹೇಬ್ ಬೆಳ್ವೆ, ಬೆಳ್ವೆ ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಬ್ಯಾರಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಂಜೀವ ಆರ್ಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಏಳು ಮಂದಿ ರೋಗಿಗಳಿಗೆ ಸಹಾಯಧನ ಚೆಕ್ ವಿತರಿಸಲಾಯಿತು. ಒಬ್ಬರಿಗೆ ಕೃತಕ ಕಾಲು ಜೋಡಣೆಗೆ ಸಹಾಯ ಧನ ನೀಡಲಾಯಿತು. ಇದೆ ಸಂದರ್ಭದಲ್ಲಿ ಕುಂದಾಪುರ ಮಾವಿನಕಟ್ಟೆಯ ಬಡ ಯುವತಿಯ ವಿವಾಹಕ್ಕೆ ಸಹಾಯಧನ ನೀಡಲಾಯಿತು.
ಮುಸ್ತಾಕ್ ಅಹಮದ್ ಬೆಳ್ವೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಅಬ್ದುಲ್ ಶುಕೂರ್ ಬೆಳ್ವೆ ಸಹಕರಿಸಿದರು. ಹುಝೈಫ್ ಕುರಾನ್ ಪಠಿಸಿದರು. ಮುಹಮ್ಮದ್ ರಬಿ ಕಾರ್ಯಕ್ರಮ ನಿರೂಪಿಸಿದರು. ಜಾಸಿಂ ಬೆಳ್ವೆ ವಂದಿಸಿದರು.