×
Ad

ಹೆಬ್ರಿ: ಮಲಗಿದವರ ಮೇಲೆ ಟಿಪ್ಪರ್ ಹರಿದು ಓರ್ವ ಮೃತ್ಯು

Update: 2023-11-24 15:36 IST

ಹೆಬ್ರಿ, ನ.24: ಹೆಬ್ರಿ ತಾಲೂಕು ನಾಡ್ಪಾಲು ಗ್ರಾಮದ ಸೊಮೇಶ್ವರ ಪೆಟ್ರೋಲ್ ಬಂಕ್‌ನಲ್ಲಿ ಗುರುವಾರ ರಾತ್ರಿ ಗೂಡ್ಸ್ ವಾಹನವನ್ನು ನಿಲ್ಲಿಸಿ ವಾಹನದ ಎದುರು ಮಲಗಿದ್ದ ಇಬ್ಬರ ಮೇಲೆ ಇಂದು ಬೆಳಗಿನ ಜಾವ ಡೀಸೆಲ್ ಹಾಕಿಸಲು ಬಂದಿದ್ದ ಟಿಪ್ಪರ್ ಚಾಲಕ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಪರಿಣಾಮ ಒಬ್ಬರು ಸ್ಥಳದಲ್ಲೇ ಮೃತಪಟ್ಟು ಇನ್ನೊಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ.

ಕಳೆದ ರಾತ್ರಿ ಬಾಳೆಕಾಯಿ ಲೋಡ್‌ನೊಂದಿಗೆ ಬಂದ ಗೂಡ್ಸ್ ವಾಹನವನ್ನು ಪೆಟ್ರೋಲ್ ಬಂಕ್‌ನ ಒಂದು ಬದಿಯಲ್ಲಿ ನಿಲ್ಲಿಸಿ ಅದರ ಚಾಲಕರಾದ ಮಹೇಂದ್ರ ಹಾಗೂ ಶಿವರಾಜ ಎಂಬವರು ವಾಹನದ ಎದುರು ಮಲಗಿದ್ದರು.

ಇಂದು ಮುಂಜಾನೆ ಪೆಟ್ರೋಲ್ ಬಂಕ್ ಒಳಗೆ ಬಂದ ಟಿಪ್ಪರ್, ಡೀಸೆಲ್ ತುಂಬಿಸಿಕೊಂಡು ಹೋಗುವಾಗ ಅದರ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತಾ ನಿರ್ಲಕ್ಷ್ಯದಿಂದ ಒಮ್ಮೆಗೇ ವಾಹನವನ್ನು ಮುಂದಕ್ಕೆ ಚಲಾಯಿಸಿ ಎಡಬದಿಯಲ್ಲಿ ತಮ್ಮ ವಾಹನದ ಮುಂಭಾಗದಲ್ಲಿ ಮಲಗಿದ್ದವರ ಮೇಲೆಯೇ ಟಿಪ್ಪರ್‌ನ್ನು ಚಲಾಯಿಸಿಕೊಂಡು ಹೋದ ಪರಿಣಾಮ ತೀವ್ರವಾಗಿ ಗಾಯಗೊಂಡ ಶಿವರಾಜ್ ಹೆಬ್ರಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುವಾಗ ಮೃತಪಟ್ಟರೆ, ಮಹೇಂದ್ರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News