×
Ad

ಹಿರಿಯಡ್ಕ: ಅನೈತಿಕ ಪೊಲೀಸ್‌ ಗಿರಿ ಹೆಸರಿನಲ್ಲಿ ಸುಳ್ಳುಸುದ್ದಿ: ಪೊಲೀಸರಿಂದ ಕ್ರಮದ ಎಚ್ಚರಿಕೆ

Update: 2023-10-29 13:00 IST
ಸಾಂದರ್ಭಿಕ ಚಿತ್ರ

ಹಿರಿಯಡ್ಕ, ಅ.29: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನೈತಿಕ ಪೊಲೀಸ್‌ ಗಿರಿಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾ ಎಸ್ಸೈ ಮಂಜುನಾಥ ಮರಬದ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ ಬುಕ್, ವಾಟ್ಸ್ ಆ್ಯಪ್, ಇನ್ಸ್ಟ್ರಾಗ್ರಾಮ್, ಟ್ವಿಟರ್ ಮೂಲಕ ಅನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಸುಳ್ಳು ಸುದ್ದಿ ಹರಡಿ ಸಾಮಾಜಿಕ ಸ್ವಾಸ್ಥ್ಯ ಹದಗೆಡಿಸಿ ಕೋಮು ಸೌಹಾರ್ದಕ್ಕೆ ದಕ್ಕೆ ಉಂಟು ಮಾಡ ಲಾಗುತ್ತಿದೆ. ಹೀಗೆ ಸಮಾಜದ ಸೌಹಾರ್ದ ಕದಡಿಸುವವರ ವಿರುದ್ಧ ಇಲಾಖೆ ನಿರ್ದಾಕ್ಷಿಣ್ಯವಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಸ್ಸೈ ಪ್ರಕಟನೆಯಲ್ಲಿ ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News