ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಗೌರವ
ಉಡುಪಿ : ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಉಡುಪಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್ ಅಶೋಕ್, ರಾಷ್ಟ್ರೀಯ ಲೆಕ್ಕ ಪರಿಶೋಧಕರ ದಿನದ ಅಂಗವಾಗಿ ಹಿರಿಯ ಲೆಕ್ಕ ಪರಿಶೋಧಕ ಯು.ಬಿ ಅಜಿತ್ ಕುಮ್ಜಾಗಿ, ಪತ್ರಿಕಾ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ಹಾಗೂ ರಾಷ್ಟ್ರೀಯ ಅಂಚೆ ಕಾರ್ಮಿಕರ ದಿನದ ಅಂಗವಾಗಿ ಅಂಚೆಪೇದೆ ನಾಗರಾಜ್ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸುಬ್ರಹ್ಮಣ್ಯ ಜಿ.ಕುರ್ಯ, ಕಳೆದ 3 ದಶಕದಿಂದ ಪತ್ರಿಕೋದ್ಯಮದಲ್ಲಿ ಪಕ್ಷಾತೀತವಾಗಿ, ದ್ವೇಷದ ಮನೋಭಾವವನ್ನು ಇಟ್ಟುಕೊಳ್ಳದೇ ಕಾರ್ಯನಿರ್ವಹಿಸಿದ ತೃಪ್ತಿ ನನಗಿದೆ. ಪತ್ರಕರ್ತರರು ವರದಿಗಾರಿಕೆಯ ಜವಾಬ್ದಾರಿಯೊಂದಿಗೆ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣದ ಭರಾಟೆಯ ಮಧ್ಯೆ ದಾಖಲೆಯುಕ್ತ ಪ್ರಬುದ್ಧ ವರದಿಗಾರಿಕೆಯ ಮೂಲಕ ಪತ್ರಿಕೋದ್ಯಮವು ತನ್ನ ಮಹತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಕಾಂಗ್ರೆಸ್ ಪಕ್ಷದ ನಾಯಕರಾದ ಚಂದ್ರಮೋಹನ್ ಚಿಟ್ಪಾಡಿ, ಸತೀಶ್ ಪುತ್ರನ್, ಗಣೇಶ್ ನೆರ್ಗಿ, ಸತೀಶ್ ಕೊಡವೂರು, ಯುವರಾಜ್ ಪುತ್ತೂರು, ಸಂಧ್ಯಾ ತಿಲಕ್ರಾಜ್, ಮಮತಾ ಶೆಟ್ಟಿ, ಭರತ್ ಕುರ್ಮಾ, ಸಂಜಯ್ ಆಚಾರ್ಯ, ಲಕ್ಷ್ಮೀಶ್ ಶೆಟ್ಟಿ, ಲ್ಯಾನ್ಸಿ ಡಿ’ಸೋಜಾ, ಯಾದವ್ ಆಚಾರ್ಯ, ಅರ್ಚನಾ ದೇವಾಡಿಗ ಹಾಗೂ ಉದ್ಯಮಿ ಸಚಿನ್ ಅವರು ಉಪಸ್ಥಿತರಿದ್ದರು.