ಕಾನೂನಿನ ಬಗ್ಗೆ ಅರಿವಿದ್ದರೆ ವ್ಯವಸ್ಥಿತವಾಗಿ ಮುನ್ನಡೆಯಲು ಸಾಧ್ಯ: ಸಿದ್ಧರಾಮ ಪಾಟೀಲ
ಉಡುಪಿ, ಅ.26: ಬದುಕಿನಲ್ಲಿ ಹಲವಾರು ಸವಾಲುಗಳಿರುವಂತೆ, ಅವುಗಳ ನಿವಾರಣೆಗೂ ಹಲವಾರು ದಾರಿಗಳು ಇರು ತ್ತವೆ. ಆ ದಾರಿಗಳನ್ನು ಕಂಡು ಕೊಂಡಾಗ ನಾವು ಯಶಸ್ಸನ್ನು ಗಳಿಸಬಹುದು ಎಂದು ಉಡುಪಿ ಜಿಲ್ಲಾ ಕಾರಾಗೃಹ ಅಧೀಕ್ಷಕ ಸಿದ್ದರಾಮ ಪಾಟೀಲ್ ಹೇಳಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ವತಿಯಿಂದ ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಅ.21ರಂದು ಆಯೋಜಿಸ ಲಾದ ವಿದ್ಯಾರ್ಥಿ ದರ್ಬಾರ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕಾರಾಗೃಹದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದೊಂದು ಕಥೆ ಇರುತ್ತದೆ. ಅದರ ಅರಿವಿದ್ದಾಗ ಮಾತ್ರ ವ್ಯವಸ್ಥಿತವಾದ ರೀತಿಯಲ್ಲಿ ಇಲ್ಲಿ ಮುನ್ನಡೆಯ ಬಹುದು. ಹಲವು ಸಂಸ್ಥೆಗಳ ನೆರವಿನೊಂದಿಗೆ ಕಾರಾಗೃಹವು ಇಂದು ಉತ್ತಮ ವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಅಪರಾಧಿಗಳ ಜೀವನ ಹತ್ತಿರದಿಂದ ನೋಡ ಬೇಕು. ಅವರ ಬದುಕು ವಿದ್ಯಾರ್ಥಿ ಗಳಿಗೆ ಅರಿವಾಗಬೇಕು. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭ ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶ್ರೀಮತಿ ಹರಿಣಾಕ್ಷಿ ಎಂ.ಡಿ., ಉಪ ಪ್ರಾಂಶುಪಾಲ ಪ್ರೊ.ಸೋಫಿಯ ಡಯಾಸ್, ಸಾರ್ವಜನಿಕ ಸಂಪರ್ಕ ಅಧಿಕಾರಿ ರವಿನಂದನ್ ಭಟ್, ಸಂಯೋಜಕ ಅನಿಲ್ ದಾಂತೆ, ವಿದ್ಯಾರ್ಥಿ ಮುಖಂಡರು ಉಪಸ್ಥಿತರಿದ್ದರು.