ಚೆನ್ನಮ್ಮ ನಿಧನಕ್ಕೆ ಜೆ.ಪಿ.ಹೆಗ್ಡೆ ಸಂತಾಪ
Update: 2026-07-18 19:53 IST
ಕುಂದಾಪುರ, ಜು.18: ಶನಿವಾರ ಬೆಂಗಳೂರಿನಲ್ಲಿ ನಿಧನರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರಿಗೆ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಸಂತಾಪ ಸೂಚಿಸಿದ್ದಾರೆ.
ದೇಶಕ್ಕೆ ಪ್ರಧಾನಿಯನ್ನು, ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು, ಸಚಿವರನ್ನು ನೀಡಿದ್ದ ದೊಡ್ಡ ಗೌಡರ ಕುಟುಂಬದ ಯಜಮಾನಿಕೆಯನ್ನು ಹೊಂದಿದ್ದ ಅವರಲ್ಲಿನ ತಾಳ್ಮೆ ಹಾಗೂ ಗೌರವ ಸಂಸ್ಕಾರ ಎಲ್ಲರಿಗೂ ಮಾರ್ಗದರ್ಶಕ ವಾದುದು. ಚೆನ್ನಮ್ಮ ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಜೆ.ಪಿ.ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.