×
Ad

ಕಾಬೆಟ್ಟು: 40ನೇ ವರ್ಷದ ಗಣೇಶೋತ್ಸವ; ಆಮಂತ್ರಣ ಪತ್ರಿಕೆ ಬಿಡುಗಡೆ

Update: 2025-07-22 12:00 IST

ನವೀನ್ ದೇವಾಡಿಗ

ಕಾರ್ಕಳ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ಕಾಬೆಟ್ಟು ಇದರ 40ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಸಮಿತಿಯ ಅಧ್ಯಕ್ಷರಾದ ನವೀನ್ ದೇವಾಡಿಗರವರು 40ನೇ ವರ್ಷದ ಗಣೇಶೋತ್ಸವ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ, ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಸೇರಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವಂತೆ ಕರೆ ನೀಡಿ, ಕಾರ್ಯಕ್ರಮದ ಕುರಿತು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಸಮಿತಿಯ ಉಪಾಧ್ಯಕ್ಷರಾದ ನವೀನಚಂದ್ರ ಶೆಟ್ಟಿ, ಗೌರವ ಸಲಹೆಗಾರರಾದ ಎಚ್ ಕೃಷ್ಣದಾಸ ಶೆಣೈ , ಕಾರ್ಯದರ್ಶಿಗಳಾದ ಎನ್. ಕೃಷ್ಣಪ್ಪ ಶೆಟ್ಟಿ, ಕೋಶಾಧಿಕಾರಿಗಳಾದ ಪ್ರೇಮಾನಂದ ಶೆಣೈ, ಪುರಸಭೆ ಸದಸ್ಯ ಪ್ರವೀಣಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಗೌರವ ಸಲಹೆಗಾರರಾದ ವೈಕುಂಠ ಶೆಣೈರವರು ಸ್ವಾಗತಿಸಿ, ಕಾರ್ಯಧ್ಯಕ್ಷರಾದ ರಾಜೇಶ್ ಭಟ್ ಜಿ ವಂದಿಸಿ, ಶೋಭಾ ಭಾಸ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಸರ್ವಸದಸ್ಯರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News