ಕಾರ್ಕಳ: ಆರ್ಟ್ ಆಫ್ ಲಿವಿಂಗ್ ವತಿಯಿಂದ ಯೋಧ ನಮನ
ನಿವೃತ್ತ ಸೈನಿಕರು ಹಾಗೂ ರೈತ ಮಹಿಳೆಗೆ ಸನ್ಮಾನ
ಕಾರ್ಕಳ: ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ವತಿಯಿಂದ 2ನೇ ವರ್ಷದ ಯೋಧ ನಮನ ಕಾರ್ಯಕ್ರಮವು ಅಜೆಕಾರು ರಾಮ ಮಂದಿರದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಭಾರತೀಯ ಭೂಸೇನೆಯ ನಿವೃತ್ತ ಯೋಧ ಜಯ ಮೂಲ್ಯ ಕಾರ್ಯಕ್ರಮ ಉದ್ಘಾಟಿಸಿದರು.
ದೇಶದ ಗಡಿಯನ್ನು ಕಾಯುವ ಸೈನಿಕರ ಪರವಾಗಿ ಭೂಸೇನೆಯ ನಿವೃತ್ತ ಸೈನಿಕ ಜಯ ಮೂಲ್ಯ, ಕಾರ್ಕಳ ಹಾಗೂ ದೇಶಕ್ಕೆ ಅನ್ನ ನೀಡುವ ರೈತರ ಪರವಾಗಿ ರೈತ ಮಹಿಳೆ ಅಜೆಕಾರಿನ ರಾಧಾ ನಾಯಕ್ ಅವರನ್ನು ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಜಯ ಮೂಲ್ಯ, ತಾವು ಭೂಸೇನೆಯಲ್ಲಿ ಸಲ್ಲಿಸಿದ್ದ ಸುದೀರ್ಘ 21 ವರ್ಷಗಳ ಸೇವೆಯ ಅನುಭವವನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಭಾಸ್ಕರ ಶೆಟ್ಟಿ, ನಂದಕುಮಾರ್ ಹೆಗ್ಡೆ, ಸಂತೋಷ್ ಪೂಜಾರಿ, ರಮೇಶ್ ನಾಯಕ್, ನಿವೃತ್ತ ಶಿಕ್ಷಕ ಲಕ್ಷ್ಮಣ್ ಕುಕ್ಕುಜೆ, ಹರೀಶ್ ನಾಯಕ್, ಅಜೆಕಾರು ಉದ್ಯಮಿ ಬಾಲಕೃಷ್ಣ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.
ಆರ್ಟ್ ಆಫ್ ಲಿವಿಂಗ್‌ನ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿ, ಪಾಲ್ಗೊಂಡಿದ್ದರು.
ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕಿ ಮನಿಷಾ ಕಾಮತ್ ಕಾರ್ಯಕ್ರಮ ಆಯೋಜಿಸಿ, ನಿರೂಪಿಸಿದರು.