ಡಾ.ಶಿವರಾಮ ಕಾರಂತ ಜನ್ಮದಿನಾಚರಣೆ: ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ
ಉಡುಪಿ, ಆ.20: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಡಾ.ಶಿವರಾಮ ಕಾರಂತರ ಜನ್ಮದಿನವನ್ನು ಅಕ್ಟೋಬರ್ 10ರಂದು ವೈಶಿಷ್ಟಪೂರ್ಣ ಕಾರ್ಯಕ್ರಮಗಳೊಂದಿಗೆ ಆಚರಿಸಲು ಟ್ರಸ್ಟ್ ನಿರ್ಧರಿಸಿದ್ದು, ಇದರ ಅಂಗವಾಗಿ ಕಾರಂತರ ಯಾವುದಾದರೂ ಒಂದು ಕೃತಿಯ ಬಗ್ಗೆ ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಾರ್ವಜನಿಕರಿಗೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಪ್ರಬಂಧವು ಫುಲ್ ಸ್ಕೇಪ್ ಹಾಳೆಯಲ್ಲಿ ಹತ್ತು ಪುಟಗಳು ಅಥವಾ ಎರಡು ಸಾವಿರ ಶಬ್ದಗಳನ್ನು ಮೀರಿರಬಾರದು. ಪ್ರಬಂಧಗಳನ್ನು ಸ್ವಂತ ಅಕ್ಷರಗಳಲ್ಲಿ ಅಥವಾ ಟೈಪ್ ಮಾಡಬಹುದು. ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ, ಹಾಗೂ ತೃತೀಯ ಬಹುಮಾನಗಳನ್ನು ಪ್ರಶಸ್ತಿ ಪತ್ರದೊಂದಿಗೆ ಪುಸ್ತಕ ರೂಪದಲ್ಲಿ ನೀಡಲಾಗುವುದು.
ಪ್ರಬಂಧಗಳನ್ನು ಸದಸ್ಯ ಕಾರ್ಯದರ್ಶಿ, ಡಾ.ಶಿವರಾಮ ಕಾರಂತ ಟ್ರಸ್ಟ್, ಸಹಾಯಕ ನಿರ್ದೇಶಕರ ಕಛೇರಿ ಆವರಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವರಾಮ ಕಾರಂತ ಕಲಾಗ್ರಾಮ ಪ್ರಗತಿ ನಗರ, ಅಲೆವೂರು ಉಡುಪಿ- 576104 ಇವರಿಗೆ ಸೆಪ್ಟಂಬರ್ 15ರೊಳಗೆ ಕಳುಹಿಸಲು ಕೋರಲಾಗಿದೆ.
ಉತ್ತಮ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ವಿವರಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಅಥವಾ ಮೊಬೈಲ್ ಸಂಖ್ಯೆ :9964583433 ಅಥವಾ 6362517472 ಅನ್ನು ಸಂಪರ್ಕಿಸಬಹುದು ಎಂದು ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.