ಬೈಕ್ ಅವಘಡ: ಸವಾರ ಮೃತ್ಯು
ಬೈಂದೂರು: ಹಠಾತ್ತನೆ ರಸ್ತೆಗೆ ಅಡ್ಡಬಂದ ನಾಯಿಯನ್ನು ತಪ್ಪಿಸಲು ಬೈಕ್‌ಗೆ ಬ್ರೇಕ್ ಹಾಕಿದ ಸವಾರರೊಬ್ಬರು, ನಿಯಂತ್ರಣ ಕಳೆದುಕೊಂಡು ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ 9:30ರ ಸುಮಾರಿಗೆ ಉಪ್ಪುಂದ ಗ್ರಾಮದ ಮಯ್ಯರಕೇರಿಯಲ್ಲಿ ನಡೆದಿದೆ.
ಮೃತ ಬೈಕ್ ಸವಾರರನ್ನು ಉದಾನೇಶ್ವರ ಭಟ್ ಎಂದು ಗುರುತಿಸಲಾಗಿದೆ. ಇವರು ತಮ್ಮ ಹೊಂಡಾ ಬೈಕ್‌ನಲ್ಲಿ ಅಮ್ಮನವರ ತೊಪ್ಲುವಿನಿಂದ ಶಾಲೆ ಬಾಗಿಲು ಕಡೆ ಹೋಗುತಿದ್ದಾಗ ನಾಯಿಯೊಂದು ಹಠಾತ್ತನೆ ಬೈಕ್‌ಗೆ ಅಡ್ಡ ಬಂದಿತ್ತು. ನಾಯಿ ತಪ್ಪಿಸಲು ಹೋದ ಅವರು ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಹತೋಟಿ ತಪ್ಪಿ ಬೈಕ್ ಸಮೇತ ರಸ್ತೆಗೆ ಬಿದ್ದರು. ಪರಿಣಾಮ ಭಟ್ ಅವರ ತಲೆಯ ಬಲಭಾಗದಲ್ಲಿ ಗಾಯವಾಗಿದ್ದು, ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆಯೊದ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿಗೆ ದಾಖಲಿಸಿದರೂ, ಚಿಕಿತ್ಸೆ ಪಲಕಾರಿಯಾಗದೇ ಅಪರಾಹ್ನ 12:45ರ ಸುಮಾರಿಗೆ ಮೃತಪಟ್ಟರು.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.