×
Ad

ಕಾರ್ಕಳ: ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಬಿಜೆಪಿ ಪ್ರತಿಭಟನೆ

Update: 2025-06-23 12:01 IST

ಕಾರ್ಕಳ : ರಾಜ್ಯ ಸರ್ಕಾರದ ಜನವಿರೋಧಿ ನೀತಿ, 9/11 ನಿವೇಶನಗಳ ಸಮಸ್ಯೆ, ಅಕ್ರಮ ಸಕ್ರಮ ಅರ್ಜಿಗಳತಿರಸ್ಕರಿಸುವುದನ್ನು ವಿರೋಧಿಸಿ , ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಪಿಂಚಣಿ ರದ್ದತಿ ಆಕ್ಷೇಪಿಸಿ, ಆಶ್ರಯ ಮನೆಗಳ ಬಿಡುಗಡೆಗೆ ಒತ್ತಾಯಿಸಿ, ವಿದ್ಯುತ್ ದರ ಏರಿಕೆ ಖಂಡಿಸಿ ಬ್ರಹತ್ ಧರಣಿ ಸತ್ಯಾಗ್ರಹ ಸೋಮವಾರ ಕಾರ್ಕಳ ಬಸ್ಟ್ಯಾಂಡ್ ವಠಾರದಲ್ಲಿ ನಡೆಯಿತು

ಪ್ರತಿಭಟನಾಕರಾರು ಸರಕಾರ, ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿ ಸುನಿಲ್ ಕುಮಾರ್, ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಸರಕಾರ 60% ಶೇಕಡಾ ಕಮಿಷನ್ ಕಲೆಕ್ಷನ್ ನಲ್ಲಿ ಮಗ್ನವಾಗಿದೆ. ವಿವಿಧ ಇಲಾಖೆ ಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನರ ಕೆಲಸಗಳು ಆಗುತಿಲ್ಲ. ಗ್ಯಾರಂಟಿ ನೀಡುವ ನೆಪದಲ್ಲಿ ಮತ್ತೊಂದು ಕಡೆಯಿಂದ ಜನರನ್ನು ಲೂಟಿ ಮಾಡುತ್ತಿದೆ.‌ ಅದಲ್ಲದೇ ಸರಕಾರದ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಬೇಕು ಎಂದರು

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಬಿ ಜೆ ಪಿ ಕಾರ್ಕಳ ಕ್ಷೇತ್ರಧ್ಯಕ್ಷ ನವೀನ್ ನಾಯ್ಕ್ ನಿಟ್ಟೆ, ಬಿಜೆಪಿ ಮುಖಂಡ ನಿತ್ಯಾನಂದ ಪೈ, ಪುರಸಭೆ ಮಾಜಿ ಉಪಾಧ್ಯಕ್ಷ ಗಿರಿಧರ್ ನಾಯಕ್, ಮಾಜಿ ಪುರಸಭಾ ಸದಸ್ಯ ಪ್ರಕಾಶ್ ರಾವ್ ಸಂದರ್ಭೋಚಿ ತವಾಗಿ ಮಾತನಾಡಿದರು.

ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು, ನಗರ ಅಧ್ಯಕ್ಷ ನಿರಂಜನ್ ಜೈನ್, ಬಿಜೆಪಿ ವಕ್ತರ ಹರೀಶ್ ಶೆಣೈ ಕೃಷಿ ಉತ್ಪನ್ನ ಮಾರುಕಟ್ಟೆ ಮಾಜಿ ಅಧ್ಯಕ್ಷ ಸದಸ್ಯ ಅಂತೋನಿ ಡಿ ಸೋಜ ನಕ್ರೆ, ಕಾರ್ಕಳ ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ, ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಮಾಜಿ ಅಧ್ಯಕ್ಷರುಗಳಾದ ಶೋಭಾ ದೇವಾಡಿಗ, ಸುಮಾ ಕೇಶವ್, ಮಾಜಿ ಉಪಾಧ್ಯಕ್ಷರುಗಳಾದ ಪೂರ್ಣಿಮಾ ಪಲ್ಲವಿ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್ ಮಾರಿಗುಡಿ, ಮಾಜಿ ಅಧ್ಯಕ್ಷ ರಾಮಚಂದ್ರ ನಾಯಕ್, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಪುರಸಭಾ ಸದಸ್ಯರುಗಳಾದ ನೀತಾ ಆಚಾರ್ಯ, ಭಾರತೀ ಅಮೀನ್, ಮಮತಾ ಪೂಜಾರಿ, ಶಶಿಕಲಾ ಶೆಟ್ಟಿ, ಮೀನಾಕ್ಷಿ ಗಂಗಾಧರ್, ಮಾಜಿ ಸದಸ್ಯರುಗಳಾದ ಅಕ್ಷಯ್ ರಾವ್, ಪ್ರಸನ್ನ, ಸಂತೋಷ್ ರಾವ್, ಸುನೀಲ್ ಕೋಟ್ಯಾನ್, ಸಂಧ್ಯಾ ಪೈ, ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News