×
Ad

ಕಾರ್ಕಳ| ಕೂಲಿ ಕಾರ್ಮಿಕನಿಗೆ ಹಲ್ಲೆ ಪ್ರಕರಣ: ಆರೋಪಿ ಪುರಸಭಾ ಸದಸ್ಯನ ಬಂಧನ

Update: 2024-11-18 22:20 IST

ಕಾರ್ಕಳ: ಪುರಸಭೆ ಸದಸ್ಯನೋರ್ವ ಕೂಲಿ ಕಾರ್ಮಿಕನಿಗೆ ಹಲ್ಲೆ ನಡೆಸಿದ ಘಟನೆ ಕಾರ್ಕಳ ಬಂಡೀಮಠದಲ್ಲಿ ರವಿವಾರ ನಡೆದಿದೆ.

ಹಲ್ಲೆ ನಡೆಸಿದ ಆರೋಪಿ ಕಾರ್ಕಳ ಪುರಸಭೆ ಸದಸ್ಯ ಸೀತಾರಾಮ(60) ಎಂಬಾತನನ್ನು ಪೊಲೀಸರು ಸೋಮವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಲ್ಲೆಗೊಳಗಾದವರನ್ನು ನಿಟ್ಟೆ ಗ್ರಾಮದ ಬೊರ್ಗಲ್‌ಗುಡ್ಡೆ ನಿವಾಸಿ ಮಹಾಬಲ ಮೂಲ್ಯ(55) ಎಂದು ಗುರುತಿಸಲಾಗಿದೆ.

ಬಂಡೀಮಠದ ನಂದಿನಿ ಮಿಲ್ಕ್ ಪಾರ್ಲರ್‌ನ ಬಳಿ ಕುಳಿತಿದ್ದ ಮಹಾಬಲ ಮೂಲ್ಯ ಗೆ ಆರೋಪಿ ಸೀತಾರಾಮ ಅವಾಚ್ಯ ಶಬ್ದಗಳಿಂದ ನಿಂದಿಸಿ ಮರದ ಸೋಂಟೆಯಿಂದ ಕಾಲಿಗೆ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದ್ದು, ಇದರ ಪರಿಣಾಮ ಮೂಲ್ಯ ಅವರ ಬಲಗಾಲಿನ ಮೂಳೆ ಮುರಿತವಾಗಿದೆ ಎಂದು ದೂರಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News