×
Ad

ಕೊಲ್ಕತ್ತ ವೈದ್ಯಕೀಯ ವಿದ್ಯಾರ್ಥಿ ಕೊಲೆ ಪ್ರಕರಣ: ವಿಮಾ ನೌಕರರಿಂದ ಪ್ರತಿಭಟನೆ

Update: 2024-08-21 20:21 IST

ಉಡುಪಿ: ಕೊಲ್ಕತ್ತ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವಿರೋಧಿಸಿ ವಿಮಾ ನೌಕರರು ಮತ್ತು ಅಧಿಕಾರಿಗಳು ಉಡುಪಿ ವಿಭಾಗೀಯ ಕಛೇರಿಯ ಮುಂದೆ ಇಂದು ಮತ ಪ್ರದರ್ಶನ ನಡೆಸಿದರು.

ಈ ಸಂದರ್ಭದಲ್ಲಿ ನಿರ್ಮಲಾ ಮಾತನಾಡಿ, ದೇಶದಾದ್ಯಂತ ಕೊಲ್ಕತ್ತದ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಮಹಾರಾಷ್ಟ್ರದ ಬದಲಾಪುರದಲ್ಲಿ ಕಂದಮ್ಮಗಳ ಮೇಲೆ ನಡೆದಿ ರುವ ದೌರ್ಜನ್ಯ ಮತ್ತು ಬೆಂಗಳೂರಿನಲ್ಲಿ ನಡೆದಿರುವ ಪ್ರಕರಣಗಳ ಬಗ್ಗೆ ಕೂಡ ತನಿಖೆ ನಡೆದು ತಪ್ಪಿತಸ್ಥಿರಿಗೆ ಕಠಿಣ ಶಿಕ್ಷೆಯಾ ಗಬೇಕೆಂದು ಆಗ್ರಹಿಸಿದರು.

ಸರಕಾರವು ಘಟನೆ ನಡೆದಾಗ ತೇಪೆ ಹಾಕುವ ಕೆಲಸ ಮಾಡುವುದನ್ನು ಬಿಟ್ಟು ಕಟ್ಟುನಿಟ್ಟಾದ ಕಾನೂನು ರೂಪಿಸುವ ಮೂಲಕ ಅರೋಪಿಗಳಿಗೆ ಶಿಕ್ಷೆಯಾಗುವಂತ ಮಾಡಬೇಕೆಂದು ಅವರು ಆಗ್ರಹಿಸಿದರು.

ಅಧಿಕಾರಿಗಳ ಸಂಘದಿಂದ ಅನಿತಾ ಮಾತನಾಡಿ, ನಾವು ಇಂದು ಪ್ರತಿಭಟಿಸಿ ನಾಳೆ ಮರೆತು ಬಿಡುವ ಬದಲು ಈ ಕಠಿಣ ಕಾನೂನುಗಳನ್ನು ಅನುಮೋದಿಸು ವವರೆಗೆ ನಮ್ಮ ಚುನಾಯಿತ ಪ್ರತಿನಿಧಿಗಳ ಮೂಲಕ ಒತ್ತಾಯಿಸಬೇಕೆಂದು ಕರೆ ನೀಡಿ ದರು. ಈ ಸಂದರ್ಭದಲ್ಲಿ ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಕುಂದರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News