ಕೊಲ್ಲೂರು: ಲಾರಿ ಢಿಕ್ಕಿ; ಬೈಕ್ ಸವಾರ ಮೃತ್ಯು
Update: 2025-07-24 22:36 IST
ಕೊಲ್ಲೂರು: ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಜು.24 ಗುರುವಾರ ಸಂಜೆ ನಡೆದಿದೆ. ಕುಂದಾಪುರ ತಾಲೂಕಿನ, ಕೆರಾಡಿ ಗ್ರಾಮದ ಚಪ್ಪರಕ/ ಕೋಣ್‌ಬೇರು ಎಂಬಲ್ಲಿ ಅಪಘಾತ ಸಂಭವಿಸಿದೆ.
ಬೈಕ್ ಸವಾರ ರೋಧಿ ಲಾಲ್ ಮೃತರು ಎಂದು ತಿಳಿದುಬಂದಿದೆ.
ಘಟನೆ ವಿವರ: ಬೈಕ್ ಸವಾರ ಕೆರಾಡಿ ಕಡೆಯಿಂದ ಕಾರಿಬೈಲು ಕಡೆಯಿಂದ ಕೆರಾಡಿ ಕಡೆಗೆ ಗುಂಡು ಎಂಬವರು ಚಲಾಯಿಸಿಕೊಂಡು ಲಾರಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದು ರಸ್ತೆಯಲ್ಲಿ ಬೈಕ್ ಸಹಿತ ಬಿದ್ದಿದ್ದು ಲಾರಿಯ ಚಕ್ರ ಬೈಕ್ ಚಾಲಕ ರೋಧಿ ಲಾಲ್ ತಲೆಯ ಮೇಲೆ ಹತ್ತಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.