×
Ad

ಕೊರಂಟಿಕಟ್ಟೆ ನವೀಕೃತ ಮಸೀದಿ ಉದ್ಘಾಟನೆ; ಸೌಹಾರ್ದ ಸಂಗಮ

Update: 2026-01-19 17:28 IST

ಕಾಪು: ಕಳತ್ತೂರು ಕೊರಂಟಿಕಟ್ಟೆಯಲ್ಲಿ ನವೀಕೃತಗೊಂಡ ಮಸ್ಜಿದ್ ಇ ನೂರು ಮಸೀದಿ ಉದ್ಘಾಟನೆ ಕಾರ್ಯ ಕ್ರಮದ ಪ್ರಯುಕ್ತ ಸೌಹಾರ್ದ ಸಂಗಮ ಸಮಾರಂಭವನ್ನು ರವಿವಾರ ಮಸೀದಿ ವಠಾರದಲ್ಲಿ ಆಯೋಜಿಸಲಾಗಿತ್ತು.

ಸೌಹಾರ್ದ ಸಂಗಮವನ್ನು ಮಜೂರು ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಖತೀಬ್ ಅಬ್ದುಲ್ ರಶೀದ್ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಬಿ.ಎ.ಫಕ್ರುದ್ದೀನ್ ಅಲಿ ವಹಿಸಿದ್ದರು. ಖತೀಬ್ ನೌಫಲ್ ಸಖಾಫಿ ದುವಾ ನೆರವೇರಿಸಿದರು.

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿದರು. ವಕೀಲ ಹಂಝತ್ ಹೆಜಮಾಡಿ ಸೌಹಾರ್ದ ಸಂದೇಶ ನೀಡಿದರು.

ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಝ್ಮತ್ ಅಲಿ, ಪಿಡಬ್ಲ್ಯುಡಿ ಮಂಗಳೂರು ವಿಭಾಗದ ಅಹಮದ್ ನೌಝಲ್, ಕಳತ್ತೂರು ಗ್ರಾಪಂ ಅಧ್ಯಕ್ಷ ಜನಾರ್ದನ ಆಚಾರ್ಯ, ಉದ್ಯಮಿಗಳಾದ ನಿತ್ಯಾ ನಂದ ಫೈಯರ್, ಶ್ರೀಧರ ಭಟ್ ಚಂದ್ರನಗರ, ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರವೀಣ್ ಪೈ ಗುರ್ಮೆ, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಶರ್ಫುದ್ದೀನ್ ಶೇಕ್, ಗ್ರಾಪಂ ಸದಸ್ಯ ಸ್ಟ್ಯಾನ್ಲಿ ಕೋರ್ದ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ಕಾಪು ಬೀಚ್‌ನಲ್ಲಿ ಹಲವು ಮಂದಿಯ ಜೀವ ರಕ್ಷಿಸಿದ ಮೊಗವೀರ ಸಮುದಾಯದ ಏಳು ಮಂದಿಯನ್ನು, ಸಮಾಜ ಸೇವಕ ಜಲಾಲುದ್ದೀನ್ ಉಚ್ಚಿಲ ಮತ್ತು ತಂಡ, ಪತ್ರಕರ್ತರಾದ ನಝೀರ್ ಪೊಲ್ಯ, ಖಲೀಲ್ ಕಾರ್ಕಳ, ಹಿರಿಯ ಖತೀಬ್ ಅಹ್ಮದ್ ಮುಸ್ಲಿಯಾರ್, ಲೈನ್‌ಮೆನ್‌ಗಳು ಸೇರಿದಂತೆ ಹಲವು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪ್ರಮುಖರಾದ ಎಚ್.ಆರ್.ಹಸನ್, ಅಬ್ದುಲ್ ರಝಾಕ್ ಖಾಸಿಮಿ, ಅಬ್ದುಲ್ ಝಿಯಾನ್, ಅಲಿಯಬ್ಬ ಇಬ್ರಾಹಿಂ ಕೊರಂಟಿಕಟ್ಟೆ, ಅಹಮದ್ ಶಬೀರ್ ಸಖಾಫಿ, ಶಾಬಾನ್ ಕರಂದಾಡಿ, ಮುಹಮ್ಮದ್ ಮುಸ್ತಫಾ ಸಖಾಫಿ, ಅಬ್ದುಲ್ ಮಜೀದ್ ಹನೀಫ್, ಮುಹಿಯುದ್ದೀನ್ ಸಖಾಫಿ, ಯಾಕೂಬ್ ಸಅದಿ, ಸಾದಿಕ್ ದೀನರ್ ಕಾಪು, ನಝೀರ್ ಕೊಂಬಗುಡ್ಡೆ, ಅಬ್ದುಲ್ಲಾ ಸೂಪರ್‌ಸ್ಟಾರ್, ಅಬ್ದುಲ್ ಜಲೀಲ್ ಸಾಹೇಬ್, ಇಂಜಿನಿಯರ್ ಸುಲೈಮಾನ್ ಕಾಪು, ಇದ್ರೀಸ್ ಮೌಲಾನ, ಮೌಲಾನ ಅಲ್‌ಲಖ್ ರಝಾ, ಮೌಲಾನ ಝಮೀರ್ ಅಹ್ಮದ್ ರಶದಿ, ಅಬ್ಬಾಸ್ ಬ್ಯಾರಿ, ಮುಸ್ತಾಕ್ ಅಹ್ಮದ್, ಅಬ್ದುಲ್ಲಾ ಮೊಯಿದಿನ್ ಉಪಸ್ಥಿತರಿದ್ದರು.

ಮಸೀದಿ ಕಾರ್ಯದರ್ಶಿ ಇಮ್ರಾನ್ ಬಶೀರ್ ಸ್ವಾಗತಿಸಿದರು. ರಝಾಕ್ ಕೊರಂಟಿಕಟ್ಟೆ ವಂದಿಸಿದರು. ಆಸೀಫ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು.

ಮಸೀದಿ ಉದ್ಘಾಟನೆ: ನವೀಕೃತ ಮಸೀದಿಯ ಉದ್ಘಾಟನೆಯನ್ನು ಶುಕ್ರವಾರ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ನಾಯಿಬ್ ಖಾಝಿ ಅಬ್ದುಲ್ ರಹಿಮಾನ್ ಮದನಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಬಿ.ಎ.ಫಕ್ರುದ್ದೀನ್ ಅಲಿ, ಗೌರವಾಧ್ಯಕ್ಷ ಅಲ್‌ಹಾಜ್ ಅಬ್ದುಲ್ ಕರೀಂ, ಖತೀಬ್ ನೌಫಲ್ ಸಖಾಫಿ, ಮೂಳೂರು ಮಸೀದಿ ಖತೀಬ್ ಅಶ್ರಫ್ ಸಖಾಪಿ ಅಲ್ ಹಿಕಮಿ, ಶಿರ್ವ ಮಸೀದಿ ಖತೀಬ್ ಸಿರಾಜುದ್ದೀನ್ ಝೈನಿ ಅಲ್ ರಶಾದಿ, ಮಸೀದಿ ಕೋಶಾಧಿಕಾರಿ ಹನೀಫ್ ಚಂದ್ರನಗರ ಉಪಸ್ಥಿತರಿದ್ದರು.








Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News