ಕೋಟ| ಬಿಎಲ್‌ಓ ಕರ್ತವ್ಯಕ್ಕೆ ಅಡ್ಡಿ: ಪ್ರಕರಣ ದಾಖಲು

Update: 2026-07-29 21:30 IST

ಕೋಟ, ಜು.29: ಎಸ್‌ಐಆರ್ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಲ್‌ಓಗೆ ಅವಾಚ್ಯ ಶಬ್ದಗಳಿಂದ ಬೈದು, ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿ, ಕೊಲೆ ಬೆದರಿಕೆಯೊಡ್ಡಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಿಯಾರ ಗ್ರಾಮದ ಬಿಎಲ್‌ಓ ಅಮೀತಾ (50) ಎಂಬವರು ಜು.27ರಂದು ಬೆಳಗ್ಗೆ ಶಿರಿಯಾರ ಗ್ರಾಮದ ಆಡಳಿತಾಧಿಕಾರಿಯವರ ಕಚೇರಿಯಲ್ಲಿ ಎಸ್‌ಐಆರ್ ಕರ್ತವ್ಯ ನಿರ್ವಹಿಸುತ್ತಿದ್ದು, ಈ ವೇಳೆ ಸುಧೀಂದ್ರ ಶೆಟ್ಟಿ ಎಂಬಾತ ಅಲ್ಲಿಗೆ ಬಂದು ಅಮೀತಾ ಅವರಿಗೆ ಮತದಾರರ ಪಟ್ಟಿಯಲ್ಲಿ ಸೇರಿಸಲು ಮತ್ತು ತೆಗೆದು ಹಾಕಲು ತಯಾರಿಸಿದ ಪಟ್ಟಿಯನ್ನು ತೋರಿಸುವಂತೆ ಒತ್ತಾಯಿಸಿದನು.

ಬಳಿಕ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೆಲಸ ಮಾಡುತ್ತಿದ್ದ ಎಸ್‌ಐಆರ್‌ಗೆ ಸಂಬಂಧಿಸಿದ ಪುಸ್ತಕಗಳನ್ನು ಎಳೆದು ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿ, ಕೊಲೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News