ಕು.ಗೋ ‘ಸಮಗ್ರ ಹಾಸ್ಯ ಬರಹಗಳು’ ಪುಸ್ತಕ ಬಿಡುಗಡೆ
Update: 2023-09-03 20:01 IST
ಉಡುಪಿ : ಉಡುಪಿ ಸುಹಾಸಂ ವತಿಯಿಂದ ಕು.ಗೋ. ಅವರ ಸಮಗ್ರ ಹಾಸ್ಯ ಬರಹಗಳು ಪುಸ್ತಕ ಬಿಡುಗಡೆ ಸಮಾರಂಭವು ರವಿವಾರ ಉಡುಪಿ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ಜರಗಿತು.
ಪುಸ್ತಕವನ್ನು ಹಾಸ್ಯ ಸಾಹಿತಿ ಎಚ್.ಡುಂಡಿರಾಜ್, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಎನ್.ರಾಮನಾಥ ಬಿಡುಗಡೆ ಗೊಳಿಸಿದರು.
ಬಳಿಕ ಮಾತನಾಡಿದ ಎಚ್.ಡುಂಡಿರಾಜ್, ಪುಸ್ತಕದ ಮೇಲೆ ಬಹಳಷ್ಟು ಪ್ರೀತಿ ಹೊಂದಿದ್ದ ಕು.ಗೋ., ಪುಸ್ತಕ ಲೋಕದ ಬಾಹುಬಲಿ. ಈ ಪುಸ್ತಕದ ವಸ್ತು, ಶೈಲಿ ಸಾಕಷ್ಟು ವೈವಿಧ್ಯತೆಯಿಂದ ಕೂಡಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ್ ಐತಾಳ್ ವಹಿಸಿದ್ದರು. ಎಚ್.ಗೋಪಾಲ ಭಟ್ ಉಪಸ್ಥಿತರಿದ್ದರು. ನಾರಾಯಣ ಮಡಿ ಕಾರ್ಯಕ್ರಮ ನಿರೂಪಿಸಿದರು.