×
Ad

ಕುಂದಾಪುರ: ವಿದ್ಯಾರ್ಥಿ ವೇತನ, ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ

Update: 2026-01-10 22:52 IST

ಕುಂದಾಪುರ, ಜ.10: ಅಲ್ತಾರು ಬಿ.ಆರ್.ಸೇವಾಟ್ರಸ್ಟ್ ವತಿಯಿಂದ 3ನೇ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯಧನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಾಹೇಬರಕಟ್ಟೆ ಸ್ವಾಗತ್ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ವನದುರ್ಗಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ನಿರಂಜನ್ ಹೆಗ್ಡೆ ಅಲ್ತಾರ್ ಉದ್ಘಾಟಿಸಿದರು. ಬಸ್ರೂರಿನ ನಿವೃತ್ತ ಮುಖ್ಯೋಪಾಧ್ಯಾಯ ದಿನಕರ್ ಶೆಟ್ಟಿ, ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಅಧ್ಯಕ್ಷತೆಯನ್ನು ಟ್ರಸ್ಟ್‌ನ ಅಧ್ಯಕ್ಷ ಚಂದ್ರ ಅಲ್ತಾರ್ ವಹಿಸಿದ್ದರು.

ದಸಂಸ ಭೀಮಘರ್ಜನೆ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು, ಮುಖ್ಯ ಅತಿಥಿಗಳಾಗಿ ಪ್ರದೀಪ್ ಬಲ್ಲಾಳ್, ಸ್ವರ್ಣ ಕಾಮತ್ ಉಡುಪಿ, ವಿಜಯ್ ಕುಮಾರ್ ಶೆಟ್ಟಿ ಆವರ್ಸೆ, ರಘುರಾಮ್ ಶೆಟ್ಟಿ ಅಲ್ತಾರು, ಅಮೃತ್ ಪೂಜಾರಿ ಯಡ್ತಾಡಿ, ಶಶಿ ಬಳ್ಕೂರು, ರಾಘು ಶಿರೂರು ಬೇಬಿ ಅಂಡಾರು ಮೊದಲಾದವರು ಉಪಸ್ಥಿತರಿದ್ದರು.

ಪೂರ್ವಿಕ ಅಲ್ತಾರು ಸ್ವಾಗತಿಸಿದರು. ಸತೀಶ್ ಸೂರ್ಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಕ್ಷಿತಾ ಅಂಡಾರು ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News