ಕುಂದಾಪುರ: ಮರಳಲ್ಲಿ ಅರಳಿದ ನಮ್ಮೂರ ಶಾಲೆ!
Update: 2026-01-17 19:02 IST
ಕುಂದಾಪುರ: ಕುಂದಾಪುರ ಪಾರಿಜಾತದ ವತಿುಂದ ದಿ.ರಾಮ ಚಂದ್ರ ಭಟ್ ಮತ್ತು ದಿ.ಅಹಲ್ಯ ಭಟ್ ಸನೆನಪಿಗಾಗಿ ಕೋಡಿ ಬೀಚ್‌ನಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ಆಕರ್ಷಣೀಯ ’ನಮ್ಮೂರ ಶಾಲೆ’ ಪರಿಕಲ್ಪನೆಯ ಬೃಹತ್ ಮರಳು ಶಿಲ್ಪಾಕೃತಿ ಕಣ್ಮನ ಸೆಳೆಯುತ್ತಿದೆ.
ಸರಕಾರಿ ಶಾಲಾ ಮಕ್ಕಳ ಧ್ಯೇಯವನ್ನಿಟ್ಟುಕ್ಕೊಂಡು ಸ್ವಾತಂತ್ರತೆಯನ್ನು ಮತ್ತು ಬಣ್ಣದ ಕನಸ್ಸನ್ನು ಕಾಣುವ ಗಾಳಿಪಟದ ವರ್ಣನೆಯೊಂದಿಗೆ ಶಾಲಾ ದೃಶ್ಯ ಹಾಗೂ ಗಾಳಿಪಟ ಉತ್ಸವ ಎಂಬ ಬರಹದೊಂದಿಗೆ ಬಳಪವನ್ನು ಹಿಡಿದುಕೊಂಡ ಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯ ಭಾವನೆಯನ್ನು ಅಭಿವ್ಯಕ್ತಿಸುವ ಕಲಾಕೃತಿಯನ್ನು ಸ್ಯಾಂಡ್ ಥೀಂ ಉಡುಪಿಯ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ರಚಿಸಿದ್ದಾರೆ. 15 ಅಡಿ ಅಗಲ ಮತ್ತು 6 ಅಡಿ ಎತ್ತರದಲ್ಲಿ ರಚಿಸಲಾಗಿರುವ ಈ ಕಲಾಕೃತಿಯ ವೀಕ್ಷಣೆಗೆ ಜ.18ರಂದು ಮುಕ್ತ ಅವಕಾಶ ಕಲ್ಪಿಸಲಾಗಿದೆ.