×
Ad

ಕುಂದಾಪುರ: ಸಿಡಿಲು ಬಡಿದು ಉತ್ತರ ಪ್ರದೇಶ ಮೂಲದ ಕಾರ್ಮಿಕ ಮೃತ್ಯು

Update: 2023-11-25 21:26 IST

ಕುಂದಾಪುರ, ನ. 25: ಕಂಡ್ಲೂರು ಸಮೀಪದ ಹಳ್ನಾಡು ಹೊಳೆಯ ಮರಳು ಧಕ್ಕೆ ಬಳಿ ಕಾರ್ಮಿಕರೊಬ್ಬರಿಗೆ ಸಿಡಿಲು ಬಡಿದು, ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ಸಂಭವಿಸಿದೆ.

ಮೃತರನ್ನು ಉತ್ತರ ಪ್ರದೇಶ ಮೂಲದ ದೀಪ್ ಚಂದ್ (38) ಎಂದು ಗುರುತಿಸಲಾಗಿದರ.

ಇವರು ಹಳ್ನಾಡು ಹೊಳೆ ಸಮೀಒದ ಮರಳು ಧಕ್ಕೆ ಬಳಿಯ ಮನೆ (ಕಾರ್ಮಿಕರ ಶೆಡ್) ಯಲ್ಲಿ ಸಂಜೆ 6 ಗಂಟೆಯ ಸುಮಾರಿಗೆ ಕುಳಿತು ಮಾತಾಡುತ್ತಿದ್ದ ವೇಳೆ ಸಿಡಿಲು ಬಡಿದು, ಸಾವನ್ನಪ್ಪಿರುವುದಾಗಿದೆ. ಜತೆಗಿದ್ದವರಿಗೂ ಸಿಡಿಲು ಬಡಿದಿದ್ದು, ಅವರು ತಕ್ಷಣ ನೀರಿಗೆ ಹಾರಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.‌

ಯಂಗ್ ಸ್ಟಾರ್ ಕಂಡ್ಲೂರು ಆಂಬುಲೆನ್ಸ್ ನಲ್ಲಿ ಚಾಲಕ ಐಮಾನ್ ಅವರು ಮೃತದೇಹವನ್ನು ಕುಂದಾಪುರದ ಶವಗಾರಕ್ಕೆ ಸಾಗಿಸುವಲ್ಲಿ ನೆರವಾದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥತರು ಹುಟ್ಟೂರಿಗೆ ಕೊಂಡೊಯ್ಯಲಿದ್ದಾರೆ.

ಘಟನಾ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಜಯರಾಮ ಗೌಡ, ಕಂಡ್ಲೂರು ಠಾಣಾ ಉಪನಿರೀಕ್ಷಕ ಪವನ್ ನಾಯಕ್, ಪೊಲೀಸ್ ಸಿಬ್ಬಂದಿ ಭೇಟಿ ನೀಡಿದರು. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News