ಲೋಕೇಶ್ ಅಂಕದಕಟ್ಟೆ ‘ನಮ್ಮೂರ ಪ್ರಶಸ್ತಿ’ ಆಯ್ಕೆ
Update: 2026-01-19 21:14 IST
ಕೋಟ, ಜ.19: ಬೀಜಾಡಿ-ಗೋಪಾಡಿ ಮಿತ್ರ ಸಂಗಮದ 29ನೇ ವಾರ್ಷಿಕೋತ್ಸವ ಜ.24ರಂದು ಶನಿವಾರ ಸಂಜೆ 7ಗಂಟೆಗೆ ಬೀಜಾಡಿ ಮಿತ್ರಸೌಧ ವಠಾರ ಜರುಗಲಿದೆ.
ಈ ಸಂದರ್ಭದಲ್ಲಿ ಸಮಾಜ ಸೇವಕ, ಕೋಟೇಶ್ವರ ಗ್ರಾಪಂ ಸದಸ್ಯ ಲೋಕೇಶ್ ಅಂಕದಕಟ್ಟೆ ಅವರಿಗೆ ಸಂಸ್ಥೆಯ ವತಿಯಿಂದ ಪ್ರತಿವರ್ಷ ಕೊಡಮಾಡುವ ಊರ ಗೌರವದ ನಮ್ಮೂರ ಪ್ರಶಸ್ತಿ ಪ್ರದಾನ ಮಾಡ ಲಾಗುವುದು. ಸಾಧಕರಾದ ಉಡುಪಿ ಜಿಲ್ಲಾ ಶಿಕ್ಷಕ ತರಬೇತಿ ಕೇಂದ್ರ ನಿವೃತ್ತ ಉಪನ್ಯಾಸಕ ಪ್ರಭಾಕರ ಮಿತಂತ್ಯಾಯ, ಬೀಜಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ ಪೂಜಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ, ಕ್ರೀಡಾಪಟುಗಳಾದ ರಚಿತಾ ಹತ್ವಾರ್, ಜನನಿ, ಅನನ್ಯ, ಯಶಸ್ ವೈ ಆಚಾರ್ ಅವರನ್ನು ಸನ್ಮಾನಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಮಹೇಶ್ ಮೊಗವೀರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.