×
Ad

ಉಡುಪಿ ಪರಿವಾರ್ ಗ್ರೂಪ್ಸ್‌ನ ಸ್ಥಾಪಕ ಕೆ.ಗೋಪಾಲ ನಿಧನ

Update: 2026-01-19 21:16 IST

ಕೋಟ: ಉಡುಪಿಯ ಪ್ರತಿಷ್ಠಿತ ಪರಿವಾರ್ ಬೇಕರಿ ಗ್ರೂಪ್‌ನ ಸ್ಥಾಪಕರು, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಮಾಜಿ ಅಧ್ಯಕ್ಷ, ಕಿನ್ನಿಮುಲ್ಕಿ ನಿವಾಸಿ ಕೆ.ಗೋಪಾಲ(86) ಅನಾರೋಗ್ಯದಿಂದ ಜ.19ರಂದು ನಿಧನರಾದರು.

ಇವರು ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷರಾಗಿ 24ವರ್ಷ ಸೇವೆ ಸಲ್ಲಿಸಿ ಸಮಾಜವನ್ನು ಸಂಘಟಿಸುವುದರ ಜತೆಗೆ ಬಾರ್ಕೂರಿನಲ್ಲಿರುವ ಗಾಣಿಗ ಸಮಾಜದ ಕುಲದೇವರಾದ ವೇಣು ಗೋಪಾಲಕೃಷ್ಣ ದೇಗುಲವನ್ನು ಸಮಗ್ರವಾಗಿ ಪುನಃ ನಿರ್ಮಾಣ ಮಾಡುವಲ್ಲಿ ಸೇವೆ ಸಲ್ಲಿಸಿದ್ದರು. ಸಮಾಜದ ಸಂಘಟನೆಗೆ ಪೂರಕವಾಗಿ ವೇಣು ಗೋಪಾಲಕೃಷ್ಣ ಎಜುಕೇಶನ್ ಸೊಸೈಟಿ ಸ್ಥಾಪನೆ, ಅಶಕ್ತ ಯಕ್ಷಗಾನ ಕಲಾವಿದರಿಗೆ ಯಕ್ಷನಿಧಿ ಸ್ಥಾಪನೆ, ಯುವ ಸಂಘಟನೆಗಳ ಸ್ಥಾಪನೆ, ವಲಯಗಳ ರಚನೆ, ಅನ್ನಪೂರ್ಣೇಶ್ವರಿ ಮಹಿಳಾ ಬಳಗ ಸ್ಥಾಪನೆ ಸೇರಿದಂತೆ ದೇಗುಲದ ಅಭಿವೃದ್ಧಿಗೆ ಸಮಗ್ರವಾಗಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ಹಾಗೂ ಪುತ್ರರಾದ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಪ್ರಸ್ತುತ ಅಧ್ಯಕ್ಷ ಉದಯ ಕೆ. ಹಾಗೂ ಬಾರ್ಕೂರು ವೇಣುಗೋಪಾಲ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿಜಯ ಕೆ. ಮತ್ತು ಪುತ್ರಿಯನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News