×
Ad

ಬೆಂಕಿ ಅಕಸ್ಮಿಕದಿಂದ ವ್ಯಕ್ತಿ ಮೃತ್ಯು

Update: 2026-01-11 22:03 IST

ಬೈಂದೂರು, ಜ.11: ದೇವರಿಗೆ ದೀಪ ಹಚ್ಚುವ ವೇಳೆ ಅಕಸ್ಮಿಕವಾಗಿ ಧರಿಸಿದ ನೈಟಿಗೆ ತಗಲಿದ ಬೆಂಕಿಯಿಂದ ಮೈಮುಖ ಸುಟ್ಟು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಉಪ್ಪುಂದ ಗ್ರಾಮದ ಶೋಭಾ (61) ಎಂಬವರು ಚಿಕಿತ್ಸೆ ಪಲಕಾರಿಯಾಗದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ಜ.5ರಂದು ಘಟನೆ ನಡೆದಿತ್ತು. ಮಗ-ಸೊಸೆಯೊಂದಿಗೆ ಉಪ್ಪುಂದ ಪೇಟೆಯಲ್ಲಿ ವಾಸವಾಗಿದ್ದ ಶೋಭಾ ಅವರು ಸಂಜೆ 6ಗಂಟೆಗೆ ಮನೆಯಲ್ಲಿ ದೇವರಿಗೆ ಹಚ್ಚುವ ವೇಳೆ ಘಟನೆ ನಡೆದಿತ್ತು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News